ಮಾಲಕರಿಗೆ ಕೊರೋನ: ಕರಾವಳಿ ಬೈಪಾಸ್‌ನ ಹೊಟೇಲ್ ಸೀಲ್‌ಡೌನ್

Update: 2020-07-04 14:21 GMT

ಉಡುಪಿ, ಜು.4: ಕರಾವಳಿ ಬೈಪಾಸ್ ಬಳಿಯ ಮೀನಿನ ಹೊಟೇಲ್ ಮಾಲಕರೊಬ್ಬರಿಗೆ ಕೊರೋನ ಸೊಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನ ವೇಳೆ ಹೊಟೇಲ್‌ನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.

ಮಾಲ್, ಹೊಟೇಲ್ ಸೇರಿದಂತೆ ವಿವಿಧ ಅಂಗಡಿಮುಗ್ಗಟ್ಟಿನವರು ಕೊರೋನ ಪರೀಕ್ಷೆ ಮಾಡುವಂತೆ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಅದರಂತೆ ಈ ಹೊಟೇಲಿನ ಮಾಲಕರು ಹಾಗೂ ನೌಕರರು ಪರೀಕ್ಷೆ ಮಾಡಿಸಿ ಕೊಂಡಾಗ ಒಬ್ಬರಲ್ಲಿ ಸೋಂಕು ಇರುವುದು ದೃಢಪಟ್ಟಿದೆ.

ಅದರಂತೆ ತಾಲೂಕು ಕಚೇರಿಯ ಕಂದಾಯ ಅಧಿಕಾರಿಗಳು ಹಾಗೂ ನಗರ ಪೊಲೀಸರು ಆಗಮಿಸಿ ಈ ಹೊಟೇಲಿನ ಸಂಬಂಧಪಟ್ಟ ಎರಡು ಕಟ್ಟಡವನ್ನು ಬಂದ್ ಮಾಡಿ ಸೀಲ್‌ಡೌನ್ ಮಾಡಿದ್ದಾರೆ. ಕೆಲವು ಸಮಯಗಳ ಹಿಂದೆ ಬಾಣಸಿಗರೊಬ್ಬರಿಗೆ ಸೋಂಕು ಬಂದಿರುವುದರಿಂದ ಬನ್ನಂಜೆಯ ಹೊಟೇಲ್ ಕೂಡ ಸೀಲ್‌ಡೌನ್ ಆಗಿತ್ತು.

ಅಟೋ ಚಾಲಕರಿಗೂ ಪಾಸಿಟಿವ್: ಇವರೊಂದಿಗೆ ಕುಂದಾಪುರ ತಾಲೂಕಿನ ಇಬ್ಬರು ಅಟೋ ಚಾಲಕರೂ ಕೊರೋನ ಸೋಂಕಿಗೆ ಪಾಸಿಟಿವ್ ಆಗಿದ್ದಾರೆ ಎಂದು ತಿಳಿದುಬಂದಿದೆ. ಬಳ್ಕೂರು ಹಾಗೂ ಗೋಪಾಡಿಯ ಈ ಅಟೋ ಚಾಲಕರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News