​ಹೆಚ್ಚುತ್ತಿರುವ ಕೋವಿಡ್ ಪ್ರಕರಣ: ಜು.6ರಿಂದ ಕ್ಯಾಂಪ್ಕೊ ಪ್ರಧಾನ ಕಚೇರಿ ಪ್ರವೇಶಕ್ಕೆ ನಿರ್ಬಂಧ

Update: 2020-07-04 17:32 GMT

ಮಂಗಳೂರು, ಜು.4: ನಗರ ಆಸುಪಾಸಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜು.6ರಿಂದ ಕ್ಯಾಂಪ್ಕೊ ನಿಯಮಿತ ಮಂಗಳೂರು ಸಂಸ್ಥೆಯ ಸ್ಟೇಟ್‌ಬ್ಯಾಂಕ್ ಬಳಿಯ ಮಿಶನ್ ರಸ್ತೆಯಲ್ಲಿರುವ ಪ್ರಧಾನ ಕಚೇರಿಗೆ ಸದಸ್ಯ ಬೆಳೆಗಾರರು ಮತ್ತು ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಸದಸ್ಯ ಬೆಳೆಗಾರರು ಮಾಹಿತಿಗಾಗಿ ದೂರವಾಣಿ ಸಂಖ್ಯೆಗಳನ್ನು (ಠೇವಣಿಗಳ ಬಗ್ಗೆ - 0824 2888206/252, 09895838107) (ಶೇರುಗಳ ಬಗ್ಗೆ - 0824 2888230, 09448777605) (ಆಡಳಿತ ವಿಭಾಗ - 0824 2888212, 09902457301)(ಜನರಲ್ ಮೆನೇಜರ್ - 0824 2888217, 09449894570) ಸಂಪರ್ಕಿಸಲು ಕ್ಯಾಂಪ್ಕೋ ವ್ಯವಸ್ಥಾಪಕ ನಿರ್ದೇಶಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News