​ಅಡ್ಯಾರ್ ಕಣ್ಣೂರಿನಲ್ಲಿ ಭಿತ್ತಿಪತ್ರ ಪ್ರದರ್ಶನ

Update: 2020-07-04 17:52 GMT

ಮಂಗಳೂರು, ಜು.4: ಕೊರೋನ ವೈರಸ್ ಹಾವಳಿಯಿಂದ ದೇಶದ ಜನರು ಜೀವನ್ಮರಣದ ಹೋರಾಟ ನಡೆಸುತ್ತಿದ್ದಾರೆ. ಲಾಕ್‌ಡೌನ್ ನಂತರ ಜನಸಾಮಾನ್ಯರು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಉದ್ಯೋಗದಿಂದ ಹಿಡಿದು ಮನೆ ಮಠ ಎಲ್ಲಾವನ್ನು ಕಳೆದು ಬೀದಿಪಾಲಾಗಿದ್ದಾರೆ. ಈ ಸಂದಿಗ್ಧ ಕಾಲದಲ್ಲಿ ಜನರು ಪ್ರಧಾನಿ ನರೇಂದ್ರ ಮೋದಿ ಮೇಲಿಟ್ಟ ನಂಬಿಕೆಗಳೆಲ್ಲಾವು ಹುಸಿಯಾಗಿದೆ. ಸಮಸ್ಯೆಯನ್ನು ಬಗೆಹರಿಸಬೇಕಾಗಿದ್ದ ಸರಕಾರ ಜನವಿರೋಧಿ ನೀತಿಗಳನ್ನು ಜಾರಿಗೆ ತರುತ್ತಿದೆ. ಕಾರ್ಮಿಕರಿಗೆ ಯಾವುದೇ ಪರಿಹಾರ ನೀಡುತ್ತಿಲ್ಲ. ಪ್ರಧಾನಿ ಮೋದಿ ಕೊರೋನಗಿಂತಲೂ ಭೀಕರರಾಗಿ ವರ್ತಿಸುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಕಂಟಕವಾಗಿ ಪರಿಣಮಿಸಿದೆ ಎಂದು ಡಿವೈಎಫ್‌ಐ ದ.ಕ. ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಆಕ್ರೋಶ ವ್ಯಕ್ತಪಡಿಸಿದರು.

ಸಿಪಿಎಂ ನೇತೃತ್ವದಲ್ಲಿ ಕಾರ್ಮಿಕರ ಪರಿಹಾರ ಒತ್ತಾಯಕ್ಕಾಗಿ ಅಡ್ಯಾರ್ ಕಣ್ಣೂರಿನಲ್ಲಿ ಕೇಂದ್ರ ಸರಕಾರದ ವಿರುದ್ಧ ಭಿತ್ತಿಪತ್ರ ಪ್ರದರ್ಶನ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.
 
ಈ ಸಂದರ್ಭ ಸಿಪಿಎಂ ಕಣ್ಣೂರು ಶಾಖೆಯ ಮುಖಂಡರಾದ ಇಸಾಕ್, ನೌಶಾದ್, ಅಬ್ದುಲ್ ಖಾದರ್, ಮನ್ಸೂರ್, ರಿಯಾಝ್ ಎ-ವನ್ ಕ್ಯಾಬ್ ಉಪಸ್ಥಿತರಿದ್ದರು._ ...

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News