ಕಾರ್ಕಳ: ಮಾಜಿ ಶಾಸಕ ದಿ. ಹೆಚ್ ಗೋಪಾಲ ಭಂಡಾರಿಯವರ ಪುಣ್ಯಸ್ಮರಣೆ

Update: 2020-07-04 18:10 GMT

ಕಾರ್ಕಳ: ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸರಕಾರದ ಪ್ರತಿಯೊಂದು ಯೋಜನೆಗಳನ್ನು ಪಕ್ಷಾತೀತ ನೆಲೆಯಲ್ಲಿ ಆರ್ಹ ಫಲಾನುಭವಿಗಳಿಗೆ ಮನೆ ಬಾಗಿಲಿಗೆ ಮುಟ್ಟಿಸುವಂತಹ ಸತ್ಕಾರ್ಯವನ್ನು ಮಾಡಿರುವ ಕೀರ್ತಿಯು ಮಾಜಿ ಶಾಸಕ ಎಚ್.ಗೋಪಾಲ ಭಂಡಾರಿಯವರಿಗೆ ಸಲ್ಲುತ್ತದೆ ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಹೇಳಿದರು. 

ಹಿರಿಯಂಗಡಿ ಮಹಾವೀರ ಸಭಾಭವನದಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ದಿ. ಹೆಚ್ ಗೋಪಾಲ ಭಂಡಾರಿಯವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕೀರ್ತಿಶೇಷ ಗೋಪಾಲ ಭಂಡಾರಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಬೂತ್ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷವನ್ನು ಕಟ್ಟಿ ಬೆಳೆಸಿರುವ ಜೊತೆಗೆ ಅಭಿವೃದ್ಧಿ ಕಾರ್ಯದಲ್ಲಿ ತನ್ನದೇ ಆದ ಪ್ರಮಾಣಿಕತೆ ತೋರಿದ ನೈಜ ಜನನಾಯಕ ಅವರಾಗಿದ್ದಾರೆ ಎಂದರು. 

ಮಾಜಿ ಸಚಿವ ಅಭಯಚಂದ್ರ ಮಾತನಾಡಿ ಭೂನ್ಯಾಯ ಮಂಡಳಿಯಲ್ಲಿ ಗೋಪಾಲಭಂಡಾರಿಯವರು ಸದಸ್ಯರಾಗಿದ್ದುಕೊಂಡು ಶೇಷ್ಠ ನ್ಯಾಯವನ್ನು ನೀಡುವ ಮೂಲಕ ಬಡಜನರ ಆಶಾಕಿರಣರಾಗಿದ್ದರು.  ಬಡವರ ಸೇವೆಗಾಗಿ ತನ್ನ ಜೀವನ ಮುಡುಪಾಗಿಟ್ಟದ್ದರು ಎಂದರು.  
 
ಮಾಜಿ ಸಚಿವ ಸಭಾಪತಿ ಮಾತನಾಡಿ, ಯುವಶಕ್ತಿ ರಾಷ್ಟ್ರಶಕ್ತಿಯಾಗಿದೆ. ಶಾಂತಿ, ಸೌಹಾರ್ದತೆ, ಸಾಮಾಜಿಕ ಚಿಂತನೆಗಳನ್ನು ಮೈಗೂಡಿಸುವಲ್ಲಿ ಯುವಶಕ್ತಿಗಳು ಮುಂದಾಗಭೇಕು ಎಂಬ ಕನಸ್ಸು ಗೋಪಾಲಭಂಡಾರಿಯವರಾದಾಗಿತ್ತು. ಅದನ್ನು ನನಸ್ಸು ಮಾಡಬೇಕಾದರೆ ಮತ್ತೆ ಯುವಶಕ್ತಿಯ ಮೂಲಕವೇ ಪಕ್ಷವನ್ನು ಸಂಘಟಿಸಬೇಕೆಂದರು. 

ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ದಿ. ಹೆಚ್ ಗೋಪಾಲ ಭಂಡಾರಿ ಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಪುಣ್ಯಸ್ಮರಣೆ ಮಾಡಿದರು.

ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡರಾದ ಡಿ.ಆರ್ ರಾಜು, ವಾದಿರಾಜ ಶೆಟ್ಟಿ, ಅಶೋಕ್ ಕುಮಾರ್, ಸಿರಿಯಣ್ಣ ಶೆಟ್ಟಿ, ಮಾಲಿನಿ ರೈ, ಸುಧಾಕರ ಕೋಟ್ಯಾನ್, ಜೆರಾಲ್ಡ್ ಡಿ ಸಿಲ್ವ, ಅನಿಲ್ ಪೂಜಾರಿ, ಕಿಶನ್ ಹೆಗ್ಡೆ, ದೀಪ ಭಂಡಾರಿ, ರಾಜೇಶ್ ಭಂಡಾರಿ ಸುಜಿತ್ ಎನ್.ಆರ್, ನವೀನ್ ದೇವಾಡಿಗ, ರಾಘವ ದೇವಾಡಿಗ, ಅಜಿತ್ ಹೆಗ್ಡೆ, ಶುಭದ ರಾವ್, ಮಧುರಾಜ್ ಶೆಟ್ಟಿ, ಉದಯ ವಿ. ಶೆಟ್ಟಿ, ನವೀನ್ ಸುವರ್ಣ, ತಾಲೂಕು ಪಂಚಾಯತ್ ಸದಸ್ಯ ಸುಧಾಕರ ಶೆಟ್ಟಿ, ಸುಬೀತ್ ಎನ್.ಆರ್, ರವಿಶಂಕರ್ ಶೇರಿಗಾರ್, ಮಹಮ್ಮದ್ ಅಸ್ಲಾಂ, ಸುಭೋಧ ಶೆಟ್ಟಿ, ಪ್ರತಿಮಾ, ನಳಿನಿ, ಶೋಭಾ, ಕಾಂಗ್ರೆಸ್ ಬೆಂಬಲಿತ ಗ್ರಾ.ಪಂ.ಸದಸ್ಯರು, ಪುರಸಭಾ ಸದಸ್ಯರು, ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶೇಖರ ಮಡಿವಾಳ ಸ್ವಾಗತಿಸಿ ಪ್ರಸ್ತಾವನೆಗೈದರು.

ಕಾಂಗ್ರೆಸ್ ವಕ್ತಾರ ಬಿಪಿನ್ಚಂದ್ರಪಾಲ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಗೋಪಾಲ್ ಭಂಡಾರಿಯವರ ಪ್ರಥಮ ಪುಣ್ಯಸ್ಮರಣೆ ಪ್ರಯುಕ್ತ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಗರಿಕರಿಂದ ಬೃಹತ್ ರಕ್ತದಾನ ಶಿಬಿರ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News