ಉಳ್ಳಾಲ: ನಾಲ್ವವರಿಗೆ ಕೊರೋನ ಸೋಂಕು ದೃಢ

Update: 2020-07-04 18:17 GMT

ಉಳ್ಳಾಲ, ಜು.4: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಇಬ್ಬರಲ್ಲಿ ಮತ್ತು ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಓರ್ವ ಮಹಿಳೆ ಕೋಟೆಕಾರು ಪಪಂ ವ್ಯಾಪ್ತಿಯಲ್ಲಿ ಓರ್ವ ಯುವಕನಲ್ಲಿ ಕೊರೋನ ಪತ್ತೆಯಾಗಿದೆ.

ಶನಿವಾರ ಉಳ್ಳಾಲ ವ್ಯಾಪ್ತಿಯ ಸಿಸಿಬಿ ಪೊಲೀಸ್, ಉಳ್ಳಾಲ ನಗರಸಭೆ ಸದಸ್ಯ, ನಗರಸಭೆ ಮಾಜಿ ಅಧ್ಯಕ್ಷ ,ಬಿಜೆಪಿ ಮುಖಂಡ ಹಾಗೂ ಉಳ್ಳಾಲ ನಗರಸಭೆ ಕಾವಲುಗಾರ ಸೇರಿದಂತೆ 35 ಪ್ರಕರಣಗಳು ದಾಖಲಾಗಿದ್ದು, ಜೂ.23 ರಿಂದ 11 ದಿನಗಳವರೆಗೆ ಉಳ್ಳಾಲದಲ್ಲಿ 113 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.
 
ತೊಕ್ಕೊಟ್ಟು ಕೃಷ್ಣ ನಗರದಲ್ಲಿ 60ವರ್ಷ ಪ್ರಾಯದ ಗಂಡಸು, ಕಲ್ಲಾಪು ಪಟ್ಲದಲ್ಲಿ 63 ವರ್ಷ ಪ್ರಾಯದ ಗಂಡಸು ಕೋಟೆಕಾರು ಪಪಂ ಕುಂಪಲ ಮಸೀದಿ ಬಳಿ 26ವರ್ಷದ ಯುವಕ ಮತ್ತು ಸೋಮೇಶ್ವರ ಪುರಸಭೆ ವ್ಯಾಪ್ತಿಯ 52ವರ್ಷ ಪ್ರಾಯದ ಮಹಿಳೆಯಲ್ಲಿ ಕೊರೋನ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ. ಕುಂಪಲದ 26ವರ್ಷದ ಯುವಕನಿಗೆ ಪಿ16434 ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗುಲಿದೆ ಎಂದು ಆರೋಗ್ಯ ಅಧಿಕಾರಿ ತಿಳಿಸಿದ್ದಾರೆ.

'ಭೀತಿ ಬೇಡ: ಖಾದರ್': ಉಳ್ಳಾಲದಲ್ಲಿ ಕೊರೋನ ಜಾಸ್ತಿ ಆಗಿರುವುದರಿಂದ ಜನರು ಭೀತಿ ಪಡದೆ ರ್ಯಾಂಡಂ ಪರೀಕ್ಷೆ ಮಾಡಿಸಬೇಕು. ಪೊಸಿಟಿವ್ ಬಂದರೆ ಏಳು ದಿನ ಕ್ವಾರಂಟೈನ್ ನಲ್ಲಿರಬೇಕು. ಈ ರೀತಿ ಜಾಗೃತಿ ಮೂಡಿಸದಿದ್ದಲ್ಲಿ ಕೊರೋನ ಸೋಂಕು ನಿಯಂತ್ರಣ ಸಾಧ್ಯ ಇಲ್ಲ ಎಂದು ಶಾಸಕ ಖಾದರ್ ತಿಳಿಸಿದ್ದಾರೆ.

ಉಳ್ಳಾಲದಲ್ಲಿ ಒಂದೇ ಕುಟುಂಬದ 16 ಸದಸ್ಯರಲ್ಲೂ ಕಂಡು ಬಂದಿದೆ. ನಾವು ನಿಯಂತ್ರಣ ಮಾಡಲು ಮುಂದಾದಲ್ಲಿ ಸಾವಿನ ಸಂಖ್ಯೆ ಜೊತೆಗೆ ಹೊಸ ಪ್ರಕರಣಗಳು ಕೂಡಾ ಕಡಿಮೆಯಾಗಬಹುದು. ಕ್ಷೇತ್ರ ವ್ಯಾಪ್ತಿಯಲ್ಲಿ ಎಲ್ಲಾ ಧರ್ಮೀಯರು, ವರ್ತಕರು, ರಿಕ್ಷಾ ಚಾಲಕರು ಸ್ವಯಂ ಪ್ರೇರಿತ ಬಂದ್ ನಡೆಸುವುದರ ಮೂಲಕ ಜಾಗೃತಿಯನ್ನು ಮೂಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಸ್ವಯಂ ಸೇವಾ ಸಂಸ್ಥೆಗಳ ಮೂಲ ಜನಜಾಗೃತಿ ಕಾರ್ಯಗಾರಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಶಾಸಕ ಯು.ಟಿ.ಖಾದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News