ಉಡುಪಿಯಲ್ಲಿ ಮಳೆ ಇಳಿಕೆ: ತಗ್ಗಿದ ಕೃತಕ ನೆರೆ

Update: 2020-07-05 13:52 GMT

ಉಡುಪಿ, ಜು.5: ಕಳೆದ ಎರಡು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆ ಇಂದು ಉಡುಪಿ ಜಿಲ್ಲೆಯಾದ್ಯಂತ ಕಡಿಮೆಯಾಗಿದ್ದು, ಇದರಿಂದ ತಗ್ಗುಪ್ರದೇಶದಲ್ಲಿ ಉಂಟಾದ ಕೃತಕ ನೆರೆ ಇಳಿಕೆಯಾಗಿದೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 66 ಮೀ.ಮೀ. ಮಳೆಯಾಗಿದೆ. ಉಡುಪಿ- 75.0 ಮೀ.ಮೀ., ಕುಂದಾಪುರ- 46.0 ಮೀ.ಮೀ. ಹಾಗೂ ಕಾರ್ಕಳ 77.0 ಮೀ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಇಂದು ಬೆಳಗ್ಗೆಯಿಂದ ಕೆಲವು ಕಡೆ ಸಾದಾರಣ ಮಳೆಯಾಗಿದೆ. ನಂತರ ಬಿಸಿಲು ಹಾಗೂ ಮೋಡ ಕವಿದ ವಾತಾವರಣ ಕಂಡುಬಂದಿದೆ. ಮಳೆ ಮುಂದುವರೆಯದ ಕಾರಣ ಕಲ್ಸಂಕ, ಉಚ್ಚಿಲ, ಬೆಳಪು ಸೇರಿದಂತೆ ಹಲವು ತಗ್ಗುಪ್ರದೇಶಗಳಲ್ಲಿನ ನೀರುಗಳು ಇಳಿಕೆಯಾಗಿವೆ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News