‘ಆರ್ಟ್ ಅಂಡ್ ಪೀಸ್ ಸ್ಟಡೀಸ್’ ಸ್ನಾತಕ್ಕೋತ್ತರ ಪದವಿ ಆರಂಭ

Update: 2020-07-05 14:08 GMT

ಮಣಿಪಾಲ, ಜು.5: ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜು ಕೇಶನ್ ಇದರ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಅಂಡ್ ಸೈನ್ಸ್(ಜಿಸಿಪಿಎಎಸ್) ವತಿಯಿಂದ ವರ್ತಮಾನದ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಹೊಸಕಾಲದ ಸ್ನಾತಕ್ಕೋತ್ತರ ಪದವಿ ‘ಆರ್ಟ್ ಅಂಡ್ ಪೀಸ್ ಸ್ಟಡೀಸ್ ಎಂ.ಎ.ಯನ್ನು ಆರಂಭಿಸಲಾಗಿದೆ.

ಆರ್ಟ್ ಅಂಡ್ ಪೀಸ್ ಸ್ಟಡೀಸ್‌ನ ಗಮನ ವಿವಿಧ ಕಲಾಪ್ರಕಾರಗಳು ಮಾತ್ರವಲ್ಲದೆ, ಸಾಮಾಜಿಕ, ರಾಜಕೀಯ, ಅಂತಾರಾಷ್ಟ್ರೀಯ ಸಂಬಂಧಗಳು, ಜೆಂಡರ್ ಸ್ಟಡೀಸ್, ಡೆವಲಪ್‌ಮೆಂಟ್ ಸ್ಟಡೀಸ್ ಮತ್ತು ಗಾಂಧಿಯನ್ ಸ್ಟಡೀಸ್ ಮೇಲೆ ಕೇಂದ್ರೀಕೃತವಾಗಿದೆ. ಕಳೆದ ವರ್ಷ ಎಂ.ಎ. ಇಕೊಸೊಫಿಕಲ್ ಎಸ್ಥೆಟಿಕ್ಸ್ ಆರಂಭಿಸಲಾಗಿತ್ತು. ಇವು ಎರಡಕ್ಕೂ ಅರ್ಜಿ ಸಲ್ಲಿಸಲು ಜುಲೈ 31 ಕೊನೆಯ ದಿನಾಂಕವಾಗಿದೆ.

ಮಾನವಿಕಶಾಸ್ತ್ರದಲ್ಲಿ ಹೆಚ್ಚು ಒಲವು ಇರುವವರಿಗೆ ಇಕೊಸೊಫಿಕಲ್ ಎಸ್ಥೆಟಿಕ್ಸ್ ಆಸಕ್ತಿದಾಯಕವಾಗಬಹುದಾದರೆ, ಆರ್ಟ್ ಅಂಡ್ ಪೀಸ್ ಸ್ಟಡೀಸ್ ಸಮಾಜ ವಿಜ್ಞಾನಗಳ ಬಗ್ಗೆ ಹೆಚ್ಚು ಒಲವು ಹೊಂದಿರುವವರಿಗೆ ಸೂಕ್ತವಾಗಿದೆ. ತತ್ವಶಾಸ್ತ್ರ ಮತ್ತು ಕಲೆಗಳು ಎರಡೂ ಸ್ನಾತಕ್ಕೋತ್ತರ ಪದವಿಗಳ ನಡುವಿನ ಸಂಪರ್ಕ ಕೊಂಡಿಯಾಗಿದ್ದು ಇವು ಪತ್ರಿಕೋದ್ಯಮ, ಮಾಧ್ಯಮ ಮತ್ತು ಸಂವಹನ ಕ್ಷೇತ್ರಕ್ಕೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತದೆ ಎಂದು ಜಿಸಿಪಿಎಎಸ್ ನಿರ್ದೇಶಕ ಪ್ರೊ.ವರದೇಶ ಹಿರೇಗಂಗೆ(ಮಾಹಿತಿಗಾಗಿ ದೂ.ಸಂ.: 0820-2922915, 2922921) ಪ್ರಕಟಣೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News