ಪಡುಬಿದ್ರಿ, ನಡಿಪಟ್ಣ, ಎರ್ಮಾಳಿನಲ್ಲಿ ಕಡಲ್ಕೊರೆತ

Update: 2020-07-05 14:11 GMT

ಪಡುಬಿದ್ರಿ: ಕೆಲವು ದಿನಗಳಿಂದ ಸುರಿಯುತ್ತಿರುವ ಮಳೆಗೆ ನಡಿಪಟ್ಣದಲ್ಲಿ ಕಡಲ್ಕೊರೆತ ತೀವ್ರಗೊಂಡಿದೆ. ಕಾಟಿಪಟ್ಣ, ಪಡುಬಿದ್ರಿ  ಬೀಚ್ ಹಾಗೂ ಎರ್ಮಾಳು ತೆಂಕದಲ್ಲಿ ಕಡಲ್ಕೊರೆತ ಕಾಣಿಸಿಕೊಂಡಿದೆ.

ಶನಿವಾರ ನಡಿಪಟ್ಣ ಮಹೇಶ್ವರೀ ಫಂಡ್ ಚಪ್ಪರದ ಬಳಿ ಸಮುದ್ರ ತಡೆಗೋಡೆ ಹಾಗೂ ಕೆಲವು ಮರಗಳು ಸಮುದ್ರ ಪಾಲಾಗಿದೆ. ಮಹೇಶ್ವರಿ ಫಂಡ್ ಚಪ್ಪರ, ಮೀನುಗಾರಿಕಾ ರಸ್ತೆ, ನಡಿಪಟ್ಣ ಹರೀಶ್ ಪುತ್ರನ್ ಮನೆಯೂ ಅಪಾಯದಲ್ಲಿದೆ. ಈಗಾಗಲೇ ಕಡಲ್ಕೊರೆತದ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಇದುವರೆಗೂ ಕಲ್ಲುಹಾಕುವ ಕೆಲಸಕ್ಕೆ ಚಾಲನೆ ನೀಡಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ಪಡುಬಿದ್ರಿ ಬೀಚ್ ಬಳಿಯೂ ಭಾನುವಾರ ಕಡಲ್ಕೊರೆತ ಕಾಣಿಸಿಕೊಂಡಿದೆ. ಕಾಡಿಪಟ್ಣದಲ್ಲೂ ಕಡಲ್ಕೊರೆತ ಕಾಣಿಸಿಕೊಂಡಿದ್ದು, ಮೀನುಗಾರಿಕಾ ರಸ್ತೆಗೆ ಅಪ್ಪಳಿಸಲು ಕೆಲವೇ ದೂರ ಅಂತರದಲ್ಲಿದೆ. ಎರ್ಮಾಳು ತೆಂಕದಲ್ಲಿಯೂ ಕಡಲ್ಕೊರೆತ ಕಾಣಿಸಿಕೊಂಡಿದೆ. ಇಲ್ಲಿ ಕಡಲ್ಕೊರೆತಕ್ಕೆ ಎರಡು ವರ್ಷಗಳ ಹಿಂದೆ ಹಾಕಲಾದ ಕಲ್ಲುಗಳು ಸಮುದ್ರ ಪಾಲಾಗುತ್ತಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News