ಕಾಸರಗೋಡು ಜಿಲ್ಲೆಯಲ್ಲಿ ರವಿವಾರ 28 ಮಂದಿಗೆ ಕೊರೋನ ಸೋಂಕು ದೃಢ

Update: 2020-07-05 14:24 GMT
ಸಾಂದರ್ಭಿಕ ಚಿತ್ರ

ಕಾಸರಗೋಡು: ಜಿಲ್ಲೆಯಲ್ಲಿ ರವಿವಾರ 28 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಇವರಲ್ಲಿ 10 ಮಂದಿ ವಿದೇಶಗಳಿಂದ, 11 ಮಂದಿ ಇತರ ರಾಜ್ಯಗಳಿಂದ ಬಂದವರು.

ಮಹಾರಾಷ್ಟ್ರದಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್ ನ 51 ವರ್ಷದ ನಿವಾಸಿ, ಎಣ್ಮಕಜೆ ಪಂಚಾಯತ್ ನ 36 ವರ್ಷದ ನಿವಾಸಿ, ಬೆಂಗಳೂರಿನಿಂದ ಆಗಮಿಸಿದ್ದ ಮೊಗ್ರಾಲ್ ಪುತ್ತೂರು ಪಂಚಾಯತ್ ನ 47 ವರ್ಷದ ನಿವಾಸಿ, ಮಂಜೇಶ್ವರ ಪಂಚಾಯತ್ ನ 43, 42 ವರ್ಷದ ನಿವಾಸಿಗಳು, ಮಂಗಳೂರಿನಿಂದ ಬಂದಿದ್ದ ಮೀಂಜ ಪಂಚಾಯತ್ ನ 41 ವರ್ಷದ ನಿವಾಸಿ, ಮಧೂರು ಪಂಚಾಯತ್ ನಿವಾಸಿ 40 ವರ್ಷದ ನಿವಾಸಿ, ಕಾಸರಗೋಡು ನಗರಸಭೆ ವ್ಯಾಪ್ತಿಯ 53 ವರ್ಷದ ನಿವಾಸಿ, ಮುಳಿಯಾರು ಪಂಚಾಯತ್ ನ 30, 35 ವರ್ಷದ ನಿವಾಸಿ ಸಹೋದರರು, ಮಂಜೇಶ್ವರ ಪಂಚಾಯತ್ ನ 47 ವರ್ಷದ ನಿವಾಸಿ, ಎರ್ನಾಕುಲಂ ನಿಂದ ಆಗಮಿಸಿದ್ದ ಕುಂಬಳೆ ಪಂಚಾಯತ್ ನಿವಾಸಿ 24 ವರ್ಷದ ನಿವಾಸಿಗೆ ಸೋಂಕು ಖಚಿತಗೊಂಡಿದೆ.

ಶಾರ್ಜಾದಿಂದ ಬಂದಿದ್ದ ಅಜಾನೂರು ಪಂಚಾಯತ್ ನ 64 ವರ್ಷದ ನಿವಾಸಿ, ಪುಲ್ಲೂರು-ಪೆರಿಯ ಪಂಚಾಯತ್ ನ 39 ವರ್ಷದ ನಿವಾಸಿ, ದುಬಾಯಿಯಿಂದ ಆಗಮಿಸಿದ್ದ ಅಜಾನೂರು ಪಂಚಾಯತ್ ನ 39 ವರ್ಷದ ನಿವಾಸಿ, ಮಂಗಲ್ಪಾಡಿ ಪಂಚಾಯತ್ ನ 23 ವರ್ಷದ ನಿವಾಸಿ, ಕುಂಬಳೆ ಪಂಚಾಯತ್ ನ 33 ವರ್ಷದ ನಿವಾಸಿ, ಕುವೈತ್ ನಿಂದ ಬಂದಿದ್ದ ಪಳ್ಳಿಕ್ಕರೆ ನಿವಾಸಿ 64 ವರ್ಷದ ನಿವಾಸಿ, ಕತರ್ ನಿಂದ ಆಗಮಿಸಿದ್ದ ಮಂಗಲ್ಪಾಡಿ ಪಂಚಾಯತ್ ನ 43 ವರ್ಷದ ನಿವಾಸಿಗಳಿಗೆ ಸೋಂಕು ಪಾಸಿಟಿವ್ ಆಗಿದೆ.

ವರ್ಕಾಡಿ ಪಂಚಾಯತ್ ನ 13 ವರ್ಷದ ಬಾಲಕನಿಗೆ, ಮಂಜೇಶ್ವರ ಪಂಚಾಯತ್ ನ 21 ವರ್ಷದ ಮಹಿಳೆಗೆ, ವರ್ಕಾಡಿ ಪಂಚಾಯತ್ ನ 21 ವರ್ಷದ ಮಹಿಳೆ, ಪೈವಳಿಕೆ ಪಂಚಾಯತ್ ನ 26 ವರ್ಷದ ಮಹಿಳೆಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ.              

ಕಾಸರಗೋಡು ಜಿಲ್ಲೆಯಲ್ಲಿ 7230 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 6902 ಮಂದಿ, ಸಾಂಸ್ಥಿಕ ನಿಗಾದಲ್ಲಿ 328 ಮಂದಿ ಇದ್ದಾರೆ. ನೂತನವಾಗಿ ರವಿವಾರ 736 ಮಂದಿ ನಿಗಾದಲ್ಲಿ ದಾಖಲಾಗಿದ್ದಾರೆ. 326 ಮಂದಿ ತಮ್ಮನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. 13808 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. ರವಿವಾರ 345 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ.    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News