ಅಮೆರಿಕ: ನಾಲ್ಕು ದಿನಗಳ ಬಳಿಕ ಸೋಂಕಿತರ ಸಂಖ್ಯೆ ಇಳಿಮುಖ

Update: 2020-07-05 15:29 GMT

ಬಾಲ್ಟಿಮೋರ್,ಜು.5: ಕೋವಿಡ್-19 ಹಾವಳಿಯಿಂದ ಹೈರಾಣಾಗಿರುವ ಅಮೆರಿಕದಲ್ಲಿ ಕಳೆದ ನಾಲ್ಕು ದಿನಗಳಲ್ಲಿ ಇದೇ ಮೊದಲ ಬಾರಿಗೆ ಶನಿವಾರದಂದು ಹೊಸ ಸೋಂಕಿನ ಪ್ರಕರಣಗಳ ಸಂಖ್ಯೆ 50 ಸಾವಿರಕ್ಕಿಂತ ಕೆಳಗೆ ಕುಸಿದಿದೆ ಎಂದು ಜಾನ್ ಹಾಪ್‌ಕಿನ್ಸ್ ವಿವಿ ಶನಿವಾರ ಪ್ರಕಟಿಸಿದ ಅಂಕಿಅಂಶಗಳಿಂದ ತಿಳಿದುಬಂದಿದೆ.

ಆದಾಗ್ಯೂ ದೇಶಾದ್ಯಂತ ಜನರು ಸುರಕ್ಷಿತ ಅಂತರವನ್ನು ಕಡೆಗಣಿಸಿ ಜುಲೈ 4ರಂದು ಅಮೆರಿಕದ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿ ಪಾಲ್ಗೊಂಡಿರುವ ಬಗ್ಗೆ ವರದಿಗಳು ಬಂದಿವೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಕೊರೋನ ಸೋಂಕಿನ ಪ್ರಕರಣಗಳಲ್ಲಿ ಭಾರೀ ಏರಿಕೆಯಾಗುವ ಅಪಾಯವಿದೆಯೆಂಬ ಆತಂಕವನ್ನು ತಜ್ಞರು ವ್ಯಕ್ತಪಡಿಸಿದ್ದಾರೆ.

    ಅಮೆರಿಕದಲ್ಲಿ ಶನಿವಾರ ಕೊರೋನ ವೈರಸ್ ಸೋಂಕಿನ 45,300 ಹೊಸ ಪ್ರಕರಣಗಳು ವರದಿಯಾಗಿವೆಯೆಂದು ಜಾನ್‌ಹಾಪ್‌ಕಿನ್ಸ್ ವಿವಿಯ ಹೇಳಿಕೆ ತಿಳಿಸಿದೆ. ಇದಕ್ಕೂ ಹಿಂದಿನ ಮೂರು ದಿನಗಳಲ್ಲಿ ಸತತವಾಗಿ 50 ಸಾವಿರಕ್ಕೂ ಅಧಿಕ ಸೋಂಕಿನ ಪ್ರಕರಣಗಳು ವರದಿಯಾಗಿದ್ದವು.

ಜಗತ್ತಿನಲ್ಲೇ ಅಮೆರಿಕದಲ್ಲಿಯೇ ಕೊರೋನ ವೈರಸ್ ಸೋಂಕಿನ ಪ್ರಕರಣಗಳು ವರದಿಯಾಗಿವೆ ಹಾಗೂ ಗರಿಷ್ಠ ಸಂಖ್ಯೆಯಲ್ಲಿ ಕೋವಿಡ್-19 ಸಾವುಗಳು ಸಂಭವಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News