ಕೋವಿಡ್-19 ಶಿಷ್ಟಾಚಾರ ಪಾಲಿಸಿದರೆ ದೊಡ್ಡ ಸಮಾರಂಭ ನಡೆಸಬಹುದು ಎಂದ ಆದಿತ್ಯನಾಥ್ !

Update: 2020-07-05 16:22 GMT

ಲಕ್ನೋ: ಕೋವಿಡ್-19 ಶಿಷ್ಟಾಚಾರಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ, ದೊಡ್ಡ ಸಭೆ ಸಮಾರಂಭಗಳನ್ನು ಆಯೋಜಿಸಬಹುದು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

ಗಿಡ ನೆಡುವ ಹಬ್ಬ ಇದಕ್ಕೆ ಸಾಕ್ಷಿ ಎಂದು ಅವರು ಹೇಳಿದ್ದಾರೆ. ಲಕ್ನೋದಲ್ಲಿ ವನಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

“ಇದೇ ವೇಳೆ ನಾವು ಜಾಗತಿಕ ಸಾಂಕ್ರಾಮಿಕದ ವಿರುದ್ಧವೂ ಹೋರಾಡಬೇಕು. ಈ ಸಸಿ ನೆಡುವ ಕಾರ್ಯಕ್ರಮದಲ್ಲಿ ಸಾಮಾಜಿಕ ಅಂತರಕ್ಕೆ ಬದ್ಧರಾಗಿರುವುದು ಸ್ಪಷ್ಟವಾಗಿ ತಿಳಿಯುತ್ತದೆ. ಇದು ಒಳ್ಳೆಯ ಪ್ರಯತ್ನ. ಸಾಮಾಜಿಕ ಅಂತರಕ್ಕೆ ಬದ್ಧರಾಗಿದ್ದರೆ ದೊಡ್ಡ ಸಮಾರಂಭಗಳನ್ನು ನಾವು ಆಯೋಜಿಸಬಹುದು. ಈ ಸಮಾರಂಭ ಇದಕ್ಕೆ ನಿದರ್ಶನ” ಎಂದು ಸಿಎಂ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಈ ವರ್ಷದ ವನಮಹೋತ್ಸವದಲ್ಲಿ 25 ಕೋಟಿ ಸಸಿಗಳನ್ನು ನೆಡಲು ಉತ್ತರ ಪ್ರದೇಶ ಸರ್ಕಾರ ಯೋಜನೆ ರೂಪಿಸಿದೆ. ರಾಜ್ಯದಲ್ಲಿ ಈಗಾಗಲೇ 5 ಕೋಟಿ ಸಸಿ ನೆಡಲಾಗಿದೆ ಎಂದು ಸಿಎಂ ಹೇಳಿದ್ದಾರೆ.

“ಕೋವಿಡ್ ಪೂರ್ವ, ಕೋವಿಡ್ ಸಂದರ್ಭ ಹಾಗೂ ಕೋವಿಡ್ ಬಳಿಕ ಹೀಗೆ ಮೂರು ವರ್ಗವನ್ನು ಇಡೀ ವಿಶ್ವ ಸ್ಪಷ್ಟವಾಗಿ ನೋಡಬಹುದು. ಇದು ಕೋವಿಡ್ 19 ಸಾಂಕ್ರಾಮಿಕಕ್ಕೆ ಮುನ್ನ ಜಗತ್ತು ಹೇಗಿತ್ತು ಎನ್ನುವುದನ್ನು, ಕೋವಿಡ್ ಸಂದರ್ಭದಲ್ಲಿ ಹೇಗಿತ್ತು ಎನ್ನುವುದನ್ನು ಮತ್ತು ಕೋವಿಡ್ ಬಳಿಕ ಯಾವ ಬದಲಾವಣೆಗಳಾಗಿವೆ ಎನ್ನುವುದನ್ನು ಇದು ತಿಳಿಸುತ್ತದೆ” ಎಂದು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News