ವೆನ್ಲಾಕ್ ಆಸ್ಪತ್ರೆಯಿಂದ ಕೊರೋನ ಸೋಂಕಿತ ಪರಾರಿ

Update: 2020-07-06 04:22 GMT

ಮಂಗಳೂರು, ಜು.5: ನಗರದ ಕೋವಿಡ್ ಆಸ್ಪತ್ರೆಯಿಂದ (ವೆನ್ಲಾಕ್) ಪಾಸಿಟಿವ್ ಇದ್ದ ರೋಗಿಯೊಬ್ಬ ರವಿವಾರ ತಪ್ಪಿಸಿಕೊಂಡಿದ್ದಾನೆ. ಮೂಲತಃ ಪುತೂರು ದರ್ಬೆ ನಿವಾಸಿಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಮಂಗಳೂರಿನಲ್ಲಿ ವಾಸ್ತವ್ಯ ಮಾಡುತ್ತಿದ್ದ ದೇವರಾಜ್ (18) ತಪ್ಪಿಸಿಕೊಂಡ ಯುವಕ.

ಕೊರೋನ ಸೋಂಕು ಶಂಕೆಯ ಹಿನ್ನೆಲೆಯಲ್ಲಿ ಜು.1ರಂದು ದೇವರಾಜ್ ಸ್ವತಃ ವೆನ್ಲಾಕ್ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದ. ರವಿವಾರ ಪಾಸಿಟಿವ್ ಎಂಬುದಾಗಿ ವರದಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸಂಜೆ ವೇಳೆಗೆ ಆತ ಆಸ್ಪತ್ರೆಯಿಂದ ತಪ್ಪಿಸಿಕೊಂಡಿದ್ದಾನೆ.

ಈ ಬಗ್ಗೆ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈತನ ಪತ್ತೆಯಾದರೆ ಪಾಂಡೇಶ್ವರ ಪೊಲೀಸ್ ಠಾಣೆಗೆ (ಫೋನ್: 0824-2220518) ಅಥವಾ ಪೊಲೀಸ್ ಕಂಟ್ರೋಲ್ ರೂಂ (ನಂ. 100/ 0824-2220800) ಗೆ ಮಾಹಿತಿ ನೀಡಲು ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News