ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ರವಿವಾರ ಲಾಕ್‌ಡೌನ್‌ಗೆ ಉತ್ತಮ ಪ್ರತಿಕ್ರಿಯೆ

Update: 2020-07-05 16:40 GMT

ಮಂಗಳೂರು,ಜು .5: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಜ್ಯ ಸರಕಾರದ ಆದೇಶದಂತೆ ಇಂದು ಜಿಲ್ಲೆಯಾದ್ಯಂತ ಲಾಕ್ ಡೌನ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಹುತೇಕ ಕಡೆಗಳಲ್ಲಿ ಜನರು ಅಂಗಡಿಗಳ ಮುಂಗಟ್ಟು ಬಂದ್ ಮಾಡಿ, ಸಾರ್ವಜನಿಕರು ರಸ್ತೆಗಿಳಿಯದೆ ಲಾಕ್ ಡೌನ್‌ಗೆ ಸಹಕಾರ ನೀಡಿರುವುದು ಕಂಡು ಬಂತು .

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ಕೆಲವು ದಿನಗಳಲ್ಲಿ ಕೊರೋನ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ಜಿಲ್ಲೆಯಾದ್ಯಂತ ಜನಸಾಮಾನ್ಯರಲ್ಲೂ ಭಯ ಹುಟ್ಟಿಸಿತ್ತು. ಪರಿಣಾಮವಾಗಿ ರಾಜ್ಯಾದ್ಯಂತ ಸರಕಾರ ಘೋಷಿಸಿದ ರವಿವಾರ ಲಾಕ್ ಡೌನ್‌ಗೆ ನಗರ ಮತ್ತು ಗ್ರಾಮೀಣ ಭಾಗದ ಜನರಿಂದಲೂ ಉತ್ತಮ ಪ್ರತಿಕ್ರಿಯೆ ಕಂಡು ಬಂತು. ಸರಕಾರಿ ಕಚೇರಿಗಳು ರಜಾ ದಿನವಾಗಿದ್ದ ಕಾರಣ ಮುಚ್ಚಿದ್ದರೆ, ಖಾಸಗಿ ಸಂಸ್ಥೆಗಳು ಕಚೇರಿಗಳನ್ನು ಮುಚ್ಚಿ ಲಾಕ್‌ಡೌನ್ ನಿಯಮಗಳನ್ನು ಸ್ವಯಂ ಪ್ರೇರಿತರಾಗಿ ಪಾಲಿಸಿರುವುದು ಜಿಲ್ಲೆಯಾದ್ಯಂತ ಕಂಡು ಬಂತು.

ಲಾಕ್ ಡೌನ್ ಸಂದರ್ಭದಲ್ಲಿ ಅಗತ್ಯ ವಸ್ತುಗಳಿಗೆ ವಿನಾಯಿತಿ ಇದ್ದರೂ ಜನ ಸಂಚಾರ ವಿರಳಗೊಂಡ ಕಾರಣ ಕೆಲವು ಅಗತ್ಯವಸ್ತುಗಳ ಅಂಗಡಿಗಳು ತೆರೆಯದೆ ಮುಚ್ಚಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News