ಬ್ರಿಟನ್ 5ಜಿ ಜಾಲದಲ್ಲಿ ಹಂತಗಳಲ್ಲಿ ವಾವೇ ತಂತ್ರಜ್ಞಾನದ ಕೊನೆ

Update: 2020-07-05 18:01 GMT

ಲಂಡನ್, ಜು. 5: ಬ್ರಿಟನ್‌ನ 5ಜಿ ಟೆಲಿಫೋನ್ ಸಂಪರ್ಕ ಜಾಲದಲ್ಲಿ ಚೀನಾದ ತಂತ್ರಜ್ಞಾನ ದೈತ್ಯ ವಾವೇಯ ತಂತ್ರಜ್ಞಾನ ಬಳಕೆಯನ್ನು ಪ್ರಧಾನಿ ಬೊರಿಸ್ ಜಾನ್ಸನ್ ಈ ವರ್ಷವೇ ಕೊನೆಗೊಳಿಸಲು ಮುಂದಾಗಿದ್ದಾರೆ ಎಂದು ‘ದ ಡೇಲಿ ಟೆಲಿಗ್ರಾಫ್’ ಶನಿವಾರ ವರದಿ ಮಾಡಿದೆ.

ಆರು ತಿಂಗಳಷ್ಟು ಕಡಿಮೆ ಅವಧಿಯಲ್ಲಿ ಬ್ರಿಟನ್‌ನ 5ಜಿ ಜಾಲದಲ್ಲಿ ವಾವೇ ಟೆಕ್ನಾಲಜಿಯ ನೂತನ ಉಪಕರಣಗಳನ್ನು ಅಳವಡಿಸುವುದನ್ನು ನಿಲ್ಲಿಸುವ ಹಾಗೂ ಈಗಾಗಲೇ ಅಳವಡಿಸಲಾಗಿರುವ ತಂತ್ರಜ್ಞಾನವನ್ನು ಕೀಳುವುದನ್ನು ತ್ವರಿತಗೊಳಿಸುವ ಪ್ರಸ್ತಾಪವನ್ನು ಅಧಿಕಾರಿಗಳು ಮುಂದಿಡುತ್ತಿದ್ದಾರೆ ಎಂದು ಪತ್ರಿಕೆ ಹೇಳಿದೆ.

ಚೀನಾದ ತಂತ್ರಜ್ಞಾನದ ಬಗ್ಗೆ ಬ್ರಿಟನ್‌ನ ಬೇಹುಗಾರಿಕಾ ಸಂಸ್ಥೆ ಜಿಸಿಎಚ್‌ಕ್ಯೂ ಹೊಸದಾಗಿ ಭದ್ರತಾ ಕಳವಳವನ್ನು ವ್ಯಕ್ತಪಡಿಸಿದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.

ವಾವೇ ಮೇಲೆ ಅಮೆರಿಕ ವಿಧಿಸಿರುವ ದಿಗ್ಬಂಧನಗಳ ಹಿನ್ನೆಲೆಯಲ್ಲಿ, ನಂಬಿಕಸ್ತವಲ್ಲದ ತಂತ್ರಜ್ಞಾನವನ್ನು ಬಳಸುವ ಅನಿವಾರ್ಯತೆಗೆ ವಾವೇ ಕಂಪೆನಿ ಒಳಗಾಗುತ್ತದೆ. ಇದು ನಿಯಂತ್ರಿಸಲಾಗದಷ್ಟು ಅಪಾಯಕ್ಕೆ ಕಾರಣವಾಗಬಹುದು ಎಂಬುದಾಗಿ ಜಿಸಿಎಚ್‌ಕ್ಯೂನ ನ್ಯಾಶನಲ್ ಸೈಬರ್ ಸೆಕ್ಯುರಿಟಿ ಸೆಂಟರ್ ತಯಾರಿಸಿದ ವರದಿಯೊಮದು ಹೇಳುತ್ತದೆ ಎಂದು ‘ದ ಡೇಲಿ ಟೆಲಿಗ್ರಾಫ್’ ಹೇಳಿದೆ.

ಜಿಸಿಎಚ್‌ಕ್ಯೂನ ವರದಿಯು ಈ ವಾರ ಪ್ರಧಾನಿ ಬೊರಿಸ್ ಜಾನ್ಸನ್ ಕೈಸೇರುವ ನಿರೀಕ್ಷೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News