ಉಳ್ಳಾಲ: ರವಿವಾರ 56 ಮಂದಿಗೆ ಕೊರೋನ ಸೋಂಕು ದೃಢ

Update: 2020-07-05 18:29 GMT
ಸಾಂದರ್ಭಿಕ ಚಿತ್ರ

ಉಳ್ಳಾಲ, ಜು.5: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ 50, ಮುನ್ನೂರು ಗ್ರಾಪಂ ವ್ಯಾಪ್ತಿಯಲ್ಲಿ ಮೂವರು ಮಹಿಳೆಯರು, ದೇರಳಕಟ್ಟೆಯಲ್ಲಿ ಮೂವರು ಮಹಿಳೆಯರು ಸೇರಿದಂತೆ ಒಟ್ಟು 56 ಮಂದಿಯಲ್ಲಿ ರವಿವಾರ ಕೊರೋನ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.

ಉಳ್ಳಾಲ ವ್ಯಾಪ್ತಿಯ ಸಿಸಿಬಿ ಪೊಲೀಸ್, ಎಸ್ಸೈ, ಎಎಸ್ಸೈ ಸೇರಿದಂತೆ ಜೂ.23ರಿಂದ 12ದಿನಗಳವರೆಗೆ ಉಳ್ಳಾಲದಲ್ಲಿ ಒಟ್ಟು 169 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಮುಕ್ಕಚೇರಿಯಲ್ಲಿ 43 ವರ್ಷ ಪ್ರಾಯದ ಪುರುಷ, 37ವರ್ಷ ಪ್ರಾಯದ ಮಹಿಳೆ, ಕೋಡಿಯಲ್ಲಿ 50, 29, 35, 18, 32, 57, 21, 19, 46, 27, 37, 35, 39, 35, 47, 23, 32, 60 ವರ್ಷದ ಪುರುಷರು ಹಾಗೂ 16, 20, 23, 45, 58, 19, 21,40, 25 ವರ್ಷದ ಮಹಿಳೆಯರು, ಬೊಟ್ಟುವಿನಲ್ಲಿ 19ವರ್ಷದ ಪುರುಷ , ಕೋಟೆಪುರದಲ್ಲಿ 24 ವರ್ಷದ ಮತ್ತು 17 ವರ್ಷದ ಪುರುಷರು, ಅಕ್ಕರೆ ಕೆರೆಯಲ್ಲಿ 76ವರ್ಷದ ವೃದ್ದ, ಟಿ.ಸಿ.ರೋಡ್ 29 ವರ್ಷದ ಪುರುಷ, ಕುತ್ತಾರ್‌ನಲ್ಲಿ 29, 23, 25ವರ್ಷದ ಮಹಿಳೆಯರು, ದೇರಳಕಟ್ಟೆಯಲ್ಲಿ 36, 23ವರ್ಷದ ಮಹಿಳೆಯರು 24ವರ್ಷದ ಪುರುಷ ,ಉಳ್ಳಾಲದಲ್ಲಿ 25, 28, 19, 25,18, 55 ವರ್ಷದ ಪುರುಷರು 17ವರ್ಷದ ಮಹಿಳೆ, ಪೆರ್ಮನ್ನೂರುನಲ್ಲಿ 67 ವರ್ಷದ ಮಹಿಳೆಯಲ್ಲಿ ಕೊರೋನ ಇರುವುದು ದೃಢ ಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಉಳ್ಳಾಲ ಕೋಡಿಯಲ್ಲಿ ಕೋವಿಡ್ ಅಟ್ಟಹಾಸ ಮುಂದುವರೆದಿದ್ದು, ರವಿವಾರ ಅತೀ ಹೆಚ್ಚು ಪ್ರಕರಣಗಳು ಇರುವುದು ದೃಢಪಟ್ಟಿದೆ. ಕೋಡಿಯಲ್ಲಿ 18 ಪುರುಷರು, 9 ಮಹಿಳೆಯರಲ್ಲಿ ಕೊರೋನ ಇರುವುದು ಪತ್ತೆಯಾಗಿದೆ. ಕೊರೋನ ದೃಢಪಟ್ಟಿರುವ 56 ಮಂದಿಯಲ್ಲಿ 18 ಮಂದಿ ಮಹಿಳೆಯರು, 38 ಪುರುಷರು ಸೇರಿದ್ದಾರೆ. ಶನಿವಾರ ಉಳ್ಳಾಲದಲ್ಲಿ ಕೋವಿಡ್ ಪ್ರಕರಣ ಕಡಿಮೆ ಇದ್ದು, ಕಾರಣ ಜನರು ಸ್ವಲ್ಪ ನಿಟ್ಟುಸಿರು ಬಿಟ್ಟಿದ್ದರು. ರವಿವಾರ ಕೋವಿಡ್ ಅಟ್ಟಹಾಸ ತೀವ್ರಗೊಂಡ ಹಿನ್ನೆಲೆಯಲ್ಲಿ ಜನರಲ್ಲಿ ಭೀತಿಯ ವಾತಾವರಣ ನಿರ್ಮಾಣವಾಗಿದ್ದು, ಆತಂಕ ಹೆಚ್ಚಿಸಿದೆ.

ನಾಲ್ಕು ದಿನಗಳ ಹಿಂದೆ ಜನರಲ್ಲಿ ಭೀತಿಯ ವಾತಾವರಣ ಸೃಷ್ಟಿಸಿದ ಕೋವಿಡ್ ದೃಢಪಟ್ಟ ಆಝಾದ್ ನಗರದ ಒಂದೇ ಕುಟುಂಬದ 16 ಮಂದಿಯ ಪೈಕಿ 15 ಮಂದಿ ರವಿವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಉಳ್ಳಾಲ ಕೋಡಿಯಲ್ಲಿ ಕೊರೋನದಿಂದ ಮೃತಪಟ್ಟ ಮಹಿಳೆಯ ಕುಟುಂಬದ ಸದಸ್ಯರ ಗಂಟಲಿನ ದ್ರವ ಪರೀಕ್ಷೆ ಮಾಡಿಸಲಾಗಿದ್ದು, ವರದಿ ನೆಗೆಟಿವ್ ಬಂದಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News