ಉಡುಪಿ: ಮಳೆ ಇಳಿಮುಖ

Update: 2020-07-06 12:14 GMT

ಉಡುಪಿ, ಜು.6: ಎರಡು ದಿನ ಬಿರುಸಾಗಿ ಸುರಿದ ಮಳೆಯ ಪ್ರಮಾಣ, ಕಳೆದ 24ಗಂಟೆಗಳ ಅವಧಿಯಲ್ಲಿ ಇಳಿಮುಖವಾಗಿದ್ದು, ಸೋಮವಾರ ಹೆಚ್ಚಿನ ವೇಳೆ ಜಿ ಯಲ್ಲಿ ಬಿಸಿಲಿನ ವಾತಾವರಣವಿತ್ತು.

ಸೋಮವಾರ ಬೆಳಗ್ಗೆ 8:30ಕ್ಕೆ ಮುಕ್ತಾಯಗೊಂಡಂತೆ ಹಿಂದಿನ 24 ಗಂಟೆಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 19ಮಿ.ಮೀ. ಮಳೆಯಾಗಿದೆ. ಉಡುಪಿಯಲ್ಲಿ 8, ಕುಂದಾಪುರದಲ್ಲಿ 28 ಹಾಗೂ ಕಾರ್ಕಳದಲ್ಲಿ 21 ಮಿ.ಮೀ ಮಳೆಯಾದ ಬಗ್ಗೆ ವರದಿಗಳು ಬಂದಿವೆ.

ಈ ಅವಧಿಯಲ್ಲಿ ಹೆಬ್ರಿ ತಾಲೂಕಿನ ಶೇಡಿಮನೆ ಗ್ರಾಮದ ಆಶಾ ಎಂಬವರ ಮನೆ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು 25,000ರೂ.ನಷ್ಟವಾಗಿದೆ. ಇನ್ನು ಕಾಪು ತಾಲೂಕು ಪಡು ಗ್ರಾಮದ ಜಯಂತಿ, ಚಂದ್ರಾವತಿ ಹಾಗೂ ಸುಶೀಲ ಎಂಬವರ ವಾಸ್ತವ್ಯಗ ಮನೆಗಳೂ ಗಾಳಿ-ಮಳೆಗೆ ಭಾಗಶ: ಹಾನಿಗೊಂಡಿದ್ದು, ಒಟ್ಟು 25,000ರೂ.ನಷ್ಟವಾಗಿದೆಎಂದು ಜಿಲ್ಲಾ ಕಚೇರಿ ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News