ಬೆಳ್ತಂಗಡಿ: ಗಾಳಿ ಮಳೆ- ಕೋಳಿ ಫಾರಂ ಕಟ್ಟಡ ನೆಲಸಮ

Update: 2020-07-06 14:08 GMT

ಬೆಳ್ತಂಗಡಿ;  ತಾಲ್ಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆ ಸುರಿದಿದ್ದು ಅಂಡಿಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸಾವ್ಯ ಗ್ರಾಮದ ಬೀಜದಡಿ ಎಂಬಲ್ಲಿ ಸೋಮವಾರ ಗಾಳಿ- ಮಳೆಗೆ ಕೋಳಿ ಫಾರಂ ಕಟ್ಟಡ ಕುಸಿದು ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.

ಬೀಜದಡಿ ನಿವಾಸಿ ಸಂದೀಪ್ ಪೂಜಾರಿ ಅವರ ಕೋಳಿ ಫಾರಂ ಘಟಕದಲ್ಲಿ ಸುಮಾರು 3,800 ಕೋಳಿಗಳಿತ್ತು. ಮಧ್ಯಾಹ್ನದ ಗಾಳಿಗೆ ಕಟ್ಟಡ ಕುಸಿದಿದ್ದು, ನೂರಾರು ಕೋಳಿಗಳು ಅವಶೇಷದಡಿ ಸಿಲುಕಿ ಸಾವನ್ನಪ್ಪಿದೆ. ಕಟ್ಟಡ ಕುಸಿದು ₹ 10 ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ ಎಂದು ಸಂದೀಪ್ ಪೂಜಾರಿ ತಿಳಿಸಿದ್ದಾರೆ.

ರವಿವಾರ ರಾತ್ರಿ  ಧರ್ಮಸ್ಥಳ ಗ್ರಾಮದ ಕನ್ಯಾಡಿಯಲ್ಲಿರುವ ವಸತಿಗೃಹವೊಂದರ ಹಿಂಭಾಗದ ಗುಡ್ಡ ಕುಸಿದು ಬಿದ್ದು ವಸತಿ ಗೃಹ ದ ಕೊಠಡಿಗಳೊಳಗೆ ಮಣ್ಣು ಹಾಗೂ ನೀರು ತುಂಬಿಕೊಂಡಿದೆ. ಕಟ್ಟಡಕ್ಕೂ ಹಾನಿಯಾಗಿದೆ. ಇಲ್ಲಿ ಇನ್ನೂ ಮಣ್ಣು ಕುಸಿಯುವಸ್ಥಿತಿಯಲ್ಲಿದ್ದು ಅಪಾಯಕಾರಿಯಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News