ಬೆಳ್ತಂಗಡಿ: ಸೋಮವಾರ ನಾಲ್ಕು ಮಂದಿಗೆ ಕೊರೋನ ಸೋಂಕು ದೃಢ

Update: 2020-07-06 15:14 GMT

ಬೆಳ್ತಂಗಡಿ: ತಾಲೂಕಿನಲ್ಲಿ ಇಂದು ಒಂದೇ ದಿನ ನಾಲ್ಕು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಉಜಿರೆಯ ಚಾರ್ಮಾಡಿ ರಸ್ತೆಯಲ್ಲಿರುವ ಪೆಟ್ರೋಲ್ ಪಂಪ್ ನಲ್ಲಿ ಕೆಲಸ ಮಾಡುತ್ತಿದ್ದ ಯುವಕನೋರ್ವನಿಗೆ ರೋಗವಿರುವುದು ದೃಡಪಟ್ಟಿದೆ.  ಇದೇ ಪೆಟ್ರೋಲ್ ಬಂಕ್ ನಲಿ ಕೆಲಸ ಮಾಡುತ್ತಿದ್ದ ಮಹಿಳೆಗೆ ವಾರದ ಹಿಂದೆ ರೋಗವಿರಯವುದು ದೃಢಪಟ್ಟಿತ್ತು. ಈಕೆಯ ಪ್ರಾಧಮಿಕ ಸಂಪರ್ಕದಿಂದ ಯುವಕನಿಗೆ ರೋಗ ಬಂದಿರುವುದಾಗಿ ಶಂಕಿಸಲಾಗಿದೆ. 

ಮತ್ತೊಂದು ಪ್ರಕರಣ ಮದ್ದಡ್ಕದಲ್ಲಿ ದಾಖಲಾಗಿದ್ದು ಇಲ್ಲಿನ 28ವರ್ಷದ ಯುವಕನಿಗೆ ರೋಗವಿರುವುದು ದೃಡಪಟ್ಟಿದೆ. ಈತನಿಗೆ ಜ್ವರ ಕಾಣಿಸಿಕೊಂಡಿದ್ದು ಈ ಸಂದರ್ಭದಲ್ಲಿ ಗಂಟಲ ದ್ರವ ಪರೀಕ್ಷೆ ಮಾಡಲಾಗಿತ್ತು. ಇಂದು ವರದಿ ಬಂದಿದ್ದು ರೋಗವಿರುವುದು ದೃಡ ಪಟ್ಟಿದೆ. ಈತನಿಗೆ ಯಾವ ಮೂಲದಿಂದ ರೋಗ ಬಂದಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ

ಸುಲ್ಕೇರಿ ಮೊಗ್ರು ಗ್ರಾಮದಲ್ಲಿ ಜು.2 ರಂದು ಮುಂಬೈಯಿಂದ ಊರಿಗೆ ಬಂದಿದ್ದ 57 ವರ್ಷ ಹಾಗೂ 37 ವರ್ಷದ ಇಬ್ಬರು ಮಹಿಳೆಯರು ಸುಲ್ಕೇರಿ ಮೊಗ್ರು ಶಾಲೆಯಲ್ಲಿ ಕ್ವಾರೆಂಟೈನ್ ನಲ್ಲಿದ್ದರು. ಅವರ ಗಂಟಲು ದ್ರವ ಪರೀಕ್ಷೆ ವರದಿ ಇಂದು ಬಂದಿದ್ದು ಕೊರೊನ ಸೋಂಕು ದೃಢವಾಗಿದೆ.

ನಾಲ್ಕು ಸೋಂಕಿತರನ್ನು ಬೆಳ್ತಂಗಡಿಯಲ್ಲಿ ಕೋವಿಡ್ ಆಸ್ಪತ್ರೆಯಾಗಿ ಮಾರ್ಪಟ್ಟಿರುವ ಸರಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News