​ಹೆಬ್ರಿ: ರಿಕ್ಷಾ ಚಾಲಕ ನಾಪತ್ತೆ

Update: 2020-07-06 16:56 GMT

ಹೆಬ್ರಿ, ಜು.6: ಹೆಬ್ರಿ ಪೇಟೆಯಲ್ಲಿ ಸ್ವಂತ ಅಟೋರಿಕ್ಷಾದಲ್ಲಿ ದುಡಿಯುತ್ತಿದ್ದ ಸೀತಾನದಿ ದುಡ್ಡಿನಜಡ್ಡು ನಿವಾಸಿ ಎಸ್.ಆರ್.ಮಲ್ಲೇಶ್(56) ಎಂಬವರು ಜು.4ರಂದು ಸಂಜೆ ವೇಳೆ ನಾಪತ್ತೆಯಾಗಿದ್ದಾರೆ.

ಇವರು ಅನಾರೋಗ್ಯದಿಂದ ಬಳಲುತ್ತಿರುವ ಕಾರಣ ಕೆಲಸಕ್ಕೆ ಹೋಗದೆ ನೊಂದು ಮನೆಯಲ್ಲಿಯೇ ಇದ್ದು, ರಿಕ್ಷಾ ಮತ್ತು ಅವರು ಉಪಯೋಗಿಸುತ್ತಿದ್ದ ಮೊಬೈಲ್ ಮನೆಯಲ್ಲಿಯೇ ಬಿಟ್ಟು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News