ಮಂಗಳೂರು: ‘ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿ’ಯಿಂದ 50 ಶೇ. ಶುಲ್ಕ ವಿನಾಯಿತಿ ಘೋಷಣೆ

Update: 2020-07-08 06:27 GMT

ಮಂಗಳೂರು, ಜು.8: ಕೋವಿಡ್-19 ಸಂಕಷ್ಟದ ಹಿನ್ನೆಲೆಯಲ್ಲಿ ಮಂಗಳೂರಿನ ‘ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿ’ಯು 2020-21ನೇ ಸಾಲಿನ ಶೈಕ್ಷಣಿಕ ಶುಲ್ಕದಲ್ಲಿ ವಿನಾಯಿತಿ ಘೋಷಿಸಿದೆ.

ಕೊರೋನ ಸಾಂಕ್ರಾಮಿಕ ಹಾವಳಿಯಿಂದ ಪ್ರತಿಯೊಬ್ಬರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿಯು ಪ್ರಸಕ್ತ ಸಾಲಿನ (2020-21ನೇ) ಶೈಕ್ಷಣಿಕ ಶುಲ್ಕದಲ್ಲಿ 50 ಶೇ. ವಿನಾಯಿತಿ ನೀಡಲು ನಿರ್ಧರಿಸಿದೆ. ಶಾಲೆಯು ತನ್ನ ನಿಯಮಿತ ವೆಚ್ಚವನ್ನು ಭರಿಸಬೇಕಿದ್ದರೂ ಸಮುದಾಯದ ಪೋಷಕರು ಹಾಗೂ ಮಕ್ಕಳ ಅನುಕೂಲಕ್ಕಾಗಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.

ಇದಲ್ಲದೆ ಶಿಕ್ಷಣ ಇಲಾಖೆ ಅನುಮತಿ ನೀಡಿದ ಕೂಡಲೇ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಲು ಕೂಡಾ ದಿ ಶೆಫರ್ಡ್ಸ್ ಇಂಟರ್‌ನ್ಯಾಶನಲ್ ಅಕಾಡಮಿ ಸಿದ್ಧತೆಗಳನ್ನು ಮಾಡಿಕೊಂಡಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News