ಗಾಂಧಿ ಕುಟುಂಬದ ಮೂರು ಟ್ರಸ್ಟ್‌ಗಳ ವಿರುದ್ಧ ತನಿಖೆಗೆ ಸರಕಾರದಿಂದ ಸಮಿತಿ ರಚನೆ

Update: 2020-07-08 17:25 GMT

ಹೊಸದಿಲ್ಲಿ, ಜು.8: ನೆಹರೂ-ಗಾಂಧಿ ಕುಟುಂಬದ ಜೊತೆ ಸಂಪರ್ಕ ಹೊಂದಿರುವ 3 ಟ್ರಸ್ಟ್ ಹಣ ವರ್ಗಾವಣೆ ಮತ್ತು ವಿದೇಶಿ ದೇಣಿಗೆ ನಿಯಮ ಸಹಿತ ಹಲವು ನಿಯಮಗಳನ್ನು ಉಲ್ಲಂಘಿಸಿವೆ ಎಂಬ ಆರೋಪದ ತನಿಖೆಯನ್ನು ಸಂಯೋಜಿಸಲು ಕೇಂದ್ರ ಸರಕಾರ ಅಂತರ್ ಸಚಿವಾಲಯ ತಂಡವೊಂದನ್ನು ರಚಿಸಿದೆ.

ರಾಜೀವ್ ಗಾಂಧಿ ಪ್ರತಿಷ್ಟಾನ, ರಾಜೀವ್ ಗಾಂಧಿ ಚಾರಿಟೇಬಲ್ ಟ್ರಸ್ಟ್ ಮತ್ತು ಇಂದಿರಾಗಾಂಧಿ ಮೆಮೋರಿಯಲ್ ಟ್ರಸ್ಟ್ ಗಳು ಪಿಎಂಎಲ್ಎ(ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ) ಕಾಯ್ದೆ, ಆದಾಯ ತೆರಿಗೆ ಕಾಯ್ದೆ, ವಿದೇಶಿ ದೇಣಿಗೆ ನಿಯಂತ್ರಣ ಕಾಯ್ದೆಗಳನ್ನು ಉಲ್ಲಂಘಿಸಿದ ದೂರಿನ ಬಗ್ಗೆ ನಡೆಯುವ ತನಿಖೆಯನ್ನು ಜಾರಿ ನಿರ್ದೇಶನಾಲಯದ ವಿಶೇಷ ನಿರ್ದೇಶಕರ ನೇತೃತ್ವದ ಅಂತರ್ ಸಚಿವಾಲಯ ಸಮಿತಿ ಸಂಯೋಜಿಸಲಿದೆ ಎಂದು ಗೃಹ ಸಚಿವಾಲಯದ ವಕ್ತಾರರು ಹೇಳಿದ್ದಾರೆ.

 ರಾಜೀವ ಗಾಂಧಿ ಪ್ರತಿಷ್ಟಾನಕ್ಕೆ ಚೀನಾದಿಂದ ದೇಣಿಗೆ ಸಂದಾಯವಾಗಿದೆ ಎಂದು ಬಿಜೆಪಿ ಇತ್ತೀಚೆಗೆ ಆರೋಪಿಸಿದೆ. ಭಾರತದಲ್ಲಿರುವ ಚೀನಾ ರಾಯಭಾರಿ ಕಚೇರಿ ಹಾಗೂ ಚೀನಾದ ಸರಕಾರ ರಾಜೀವಗಾಂಧಿ ಪ್ರತಿಷ್ಟಾನಕ್ಕೆ ದೇಣಿಗೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಚೀನಾದ ಕಮ್ಯುನಿಸ್ಟ್ ಪಕ್ಷದ ಮಧ್ಯೆ 2008ರಲ್ಲಿ ಸಹಿ ಹಾಕಲ್ಪಟ್ಟ ತಿಳುವಳಿಕೆಯ ದಾಖಲೆ(ಎಂಒಯು)ಯ ಬಗ್ಗೆ ತನಿಖೆ ನಡೆಸಬೇಕು ಎಂದು ಕೋರಿ ಸುಪ್ರೀಂಕೋರ್ಟ್ನಲ್ಲಿ ಅರ್ಜಿ ಸಲ್ಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News