ಸಚಿವರು, ಶಾಸಕರಿಗೆ ಕೋವಿಡ್ ಸೋಂಕು: ಸ್ವಯಂ ಐಸೋಲೇಶನ್‌ಗೆ ಒಳಗಾದ ಜಾರ್ಖಂಡ್ ಮುಖ್ಯಮಂತ್ರಿ

Update: 2020-07-08 17:10 GMT

ರಾಂಚಿ, ಜು.8: ಸಚಿವ ಮಿಥಿಲೇಶ್ ಠಾಕೂರ್ ಹಾಗೂ ಶಾಸಕ ಮಥುರಾ ಮಹತೊಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ತಾನು ಸ್ವಯಂ ಹೋಂ ಕ್ವಾರಂಟೈನ್ ಗೆ ಒಳಪಡುವುದಾಗಿ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಟ್ವೀಟ್ ಮಾಡಿದ್ದಾರೆ.
ಇಬ್ಬರಿಗೂ ಸರಕಾರಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಬುಧವಾರದಿಂದ ಮುಂದಿನ ಕೆಲ ದಿನ ಸ್ವಯಂ ಕ್ವಾರಂಟೈನ್ ಗೆ ಒಳಪಡಲಿದ್ದೇನೆ. ಆದರೆ ಎಲ್ಲಾ ಮಹತ್ವದ ಕೆಲಸಗಳನ್ನು ಮುಂದುವರಿಸುತ್ತೇನೆ ಎಂದು ಸೊರೇನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಜನಸಂದಣಿಯ ಪ್ರದೇಶಕ್ಕೆ ತೆರಳುವುದನ್ನು ಸಾಧ್ಯವಿದ್ದಷ್ಟು ನಿವಾರಿಸಿಕೊಳ್ಳಿ. ಮಾಸ್ಕ್ ಕಡ್ಡಾಯ ಧರಿಸಿ, ಮಾಸ್ಕ್ ಇಲ್ಲದಿದ್ದರೆ ಬಟ್ಟೆಯಿಂದ ನಿಮ್ಮ ಮುಖವನ್ನು ಮುಚ್ಚಿಕೊಳ್ಳಿ. ಸುರಕ್ಷಿತ ಅಂತರ ಕಾಯ್ದುಕೊಳ್ಳಿ. ಆದರೆ ಹೃದಯಗಳ ಸಂಪರ್ಕ ಮುಂದುವರಿಸಿ ಎಂದು ಟ್ವೀಟ್ ಮಾಡಿರುವ ಸೊರೇನ್, ಸಚಿವ ಠಾಕುರ್ ಹಾಗೂ ಜೆಎಂಎಂ ಶಾಸಕ ಮಹತೊ ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿದ್ದಾರೆ. ಕಳೆದ ವಾರ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೊರೋನ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕಕ್ಕೆ ಬಂದಿದ್ದ ಹಿನ್ನೆಲೆಯಲ್ಲಿ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಆದರೆ ಅವರ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News