​ಬಜ್ಪೆಯಲ್ಲಿ ಸ್ವಯಂಪ್ರೇರಿತ ಬಂದ್ ಯಶಸ್ವಿ

Update: 2020-07-08 14:02 GMT

ಮಂಗಳೂರು, ಜು.8: ನಗರದ ಹೊರವಲಯ ಬಜ್ಪೆಯ ವ್ಯಾಪ್ತಿಯಲ್ಲಿ ಕೊರೋನ ಸೋಂಕು ಹಾವಳಿ ತಡೆಗಟ್ಟುವ ನಿಟ್ಟಿನಲ್ಲಿ ಬಜ್ಪೆ ವ್ಯಾಪಾರಸ್ಥರು ಬುಧವಾರ ಕರೆ ನೀಡಿದ್ದ ಸ್ವಯಂಪ್ರೇರಿತ ಬಂದ್ ಸಂಪೂರ್ಣ ಬೆಂಬಲ ವ್ಯಕ್ತವಾಗಿದೆ.

ಬಜ್ಪೆ ಗ್ರಾಪಂ ಸಭಾಂಗಣದಲ್ಲಿ ಇತ್ತೀಚೆಗೆ ಎಲ್ಲ ವರ್ತಕರು ಸಭೆ ನಡೆಸಿ ಜು.8ರಿಂದ ಜು. 22ರವರೆಗೆ ಪ್ರತಿದಿನ ಮಧ್ಯಾಹ್ನ 2ರಿಂದ ಮರುದಿನ ಬೆಳಗ್ಗೆ 7 ಗಂಟೆಯವರೆಗೆ ಅಂಗಡಿ-ಮುಂಗಟ್ಟು ಬಂದ್ ಮಾಡಲು ತೀರ್ಮಾನಿಸಿದ್ದರು. ಬಂದ್‌ನಿಂದ ರಿಕ್ಷಾ, ಬಸ್ ಹಾಗೂ ಇತರ ವಾಹನ ಸಂಚಾರ ವಿರಳವಾಗಿತ್ತು.

ಎಂಟು ವಾರ್ಡುಗಳನ್ನೊಳಗೊಂಡ ಬಜ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 3,700ರಷ್ಟು ಮನೆಗಳಿವೆ. ಬಜ್ಪೆ ಗ್ರಾಪಂ ವ್ಯಾಪ್ತಿಯಲ್ಲಿ ಈಗ ಆರು ಮಂದಿಯಲ್ಲಿ ಕೊರೋನ ಸೋಂಕು ಪತ್ತೆಯಾಗಿದೆ. ಇಲ್ಲಿನ ಸುಮಾರು 30 ಮನೆಗಳಲ್ಲಿ ಹಲವರು ಹೋಂ ಕ್ವಾರಂಟೈನ್ ಆಗಿದ್ದಾರೆ. ಕೆಲವರು ಗುಣಮುಖರಾಗಿದ್ದರೆ, ಇನ್ನು ಹಲವರು ಈಗಾಗಲೇ ಹೋಂ ಕ್ವಾರಂಟೈನ್ ಅವಧಿ ಮುಗಿಸಿದ್ದಾರೆ. ಸಮುದಾಯಕ್ಕೆ ಸೋಂಕು ಹರಡುವ ಭೀತಿಯಿಂದ ವ್ಯಾಪಾರಸ್ಥರು ಈ ತೀರ್ಮಾನಕ್ಕೆ ಬಂದಿದ್ದಾರೆಂದು ಬಜ್ಪೆ ಗ್ರಾಪಂ ಪಿಡಿಒ ಸಾಯೀಶ್ ಚೌಟ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News