ಮದ್ರಸ ಅಧ್ಯಾಪಕರಿಗೆ ಮಾಸಿಕ ಪರಿಹಾರ ನೀಡಲು ಒತ್ತಾಯ

Update: 2020-07-08 14:10 GMT

ಉಡುಪಿ, ಜು.8: ಕೊರೋನ ಲಾಕ್‌ಡೌನ್‌ನಿಂದಾಗಿ ಮದ್ರಸಗಳು ಬಂದ್ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ರಾಜ್ಯದ ಮದ್ರಸ ಅಧ್ಯಾಪಕರಿಗೆ ತಲಾ ಹತ್ತು ಸಾವಿರ ರೂ. ಮಾಸಿಕ ಪರಿಹಾರವನ್ನು ಮುಂದೆ ಮದ್ರಸಗಳು ತೆರೆದು ಕಾರ್ಯಾಚರಿಸುವವರೆಗೆ ರಾಜ್ಯ ವಕ್ಫ್ ಮಂಡಳಿಯ ಮೂಲಕ ನೀಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕು ಎಂದು ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಮಾಜಿ ಅಧ್ಯಕ್ಷ ಎಂ.ಪಿ.ಮೊಯ್ದಿನಬ್ಬ ಆಗ್ರಹಿಸಿದ್ದಾರೆ.

ಕೋವಿಡ್ -19 ಸೋಂಕಿನ ಪರಿಣಾಮ ಕಳೆದ ಮಾರ್ಚ್ ತಿಂಗಳಿಂದ ಮದ್ರಸ ಗಳನ್ನು ತೆರೆಯದೆ ಮುಚ್ಚಲಾಗಿದೆ. ಮದ್ರಸಗಳು ಮುಚ್ಚಿರುವುದರಿಂದ ಈ ಸಾವಿರಾರು ಮದ್ರಸ ಅಧ್ಯಾಪಕರು ಮನೆಯಲ್ಲೇ ಉಳಿಯುವಂತಾಗಿದೆ. ಅವರಿಗೆ ವೇತನ ನೀಡಲೂ ಮದ್ರಸ ಆಡಳಿತ ಕಮಿಟಿಗಳು ಆರ್ಥಿಕ ಸಂಪ ನ್ಮೂಲದ ಕೊರತೆ ಎದುರಿಸುತ್ತಿವೆ. ಇದರಿಂದ ಇದೇ ವೃತ್ತಿಯನ್ನು ನಂಬಿಕೊಂಡಿದ್ದ ಈ ಅಧ್ಯಾಪಕರುಗಳು ಹಾಗೂ ಅವರ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿದೆ ಎಂದು ಅವರು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಧಾನ ಕಾರ್ಯದರ್ಶಿಯವರಿಗೆ ಸಲ್ಲಿಸಿರುವ ಮನವಿಯಲ್ಲಿ ತಿಳಿಸಿದ್ದಾರೆ.

ಈ ಮದ್ರಸ ಅಧ್ಯಾಪಕರ ಸಂಕಷ್ಟಕ್ಕೆ ಸರಕಾರ ಸ್ಪಂದಿಸುವುದು ತೀರಾ ಅನಿವಾರ್ಯವಾಗಿದೆ. ಇದಕ್ಕೆ ಬೇಕಾದ ಹಣಕಾಸಿನ ವ್ಯವಸ್ಥೆಯನ್ನು ರಾಜ್ಯ ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಬೇರೆ ಬೇರೆ ಯೋಜನೆಗಳಿಗೆ ಮೀಸಲಿರಿಸಿದ ಹಣವನ್ನು ಬಳಸಿಕೊಂಡು ಈ ಮದ್ರಸ ಅಧ್ಯಾಪಕರ ಕುಟುಂಬಗಳನ್ನು ಸಂರಕ್ಷಿಸಬೇಕು ಎಂದು ಅವರು ಮನವಿಯಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News