ಲಯನ್ಸ್ ಉದ್ಯಾವರ ಸನ್‌ಶೈನ್ ಪದಾಧಿಕಾರಿಗಳ ಆಯ್ಕೆ

Update: 2020-07-08 14:30 GMT
ಜಾನ್ ಫೆರ್ನಾಂಡಿಸ್

ಉಡುಪಿ, ಜು.8: ಲಯನ್ಸ್ ಕ್ಲಬ್ ಉದ್ಯಾವರ ಸನ್‌ಶೈನ್ ಇದರ 2020- 21ನೆ ಸಾಲಿನ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಜಾನ್ ಫೆರ್ನಾಂಡಿಸ್ ಆಯ್ಕೆಯಾಗಿದ್ದಾರೆ.

ಉದ್ಯಾವರ ಬಲಾಯಿಪಾದೆ ನಿತ್ಯಾನಂದ ಸಭಾಭವನದಲ್ಲಿ ಇತ್ತೀಚೆಗೆ ಸ್ಥಾಪಕಾಧ್ಯಕ್ಷ ಹೆನ್ರಿ ಡಿಸೊಜ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಸಾಲಿನ ಕಾರ್ಯಕಾರಿ ಸವಿುತಿಯನ್ನು ಆಯ್ಕೆ ಮಾಡಲಾಗಿದೆ.

ಕಾರ್ಯದರ್ಶಿಯಾಗಿ ಜೆರಾಲ್ಡ್ ಪಿರೇರ, ಕೋಶಾಧಿಕಾರಿಯಾಗಿ ನಿವೃತ್ತ ಮುಖ್ಯ ಶಿಕ್ಷಕ ಗಾಡ್ಫ್ರಿ ಡಿಸೋಜ ಆಯ್ಕೆಯಾದರು. ವಿವಿಧ ಹುದ್ದೆಗಳಿಗಾಗಿ ಸದಸ್ಯರನ್ನು ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಯಿತು. ಸಭೆಯಲ್ಲಿ ಲಯನ್ ಜಿಲ್ಲಾ ಜಿಎಸ್ಟಿ ಸಂಯೋಜಕ ಸುನಿಲ್ ಸಾಲ್ಯಾನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News