'ವಾಟರ್ ಇಸ್ ಲೈಫ್' ಹೆಸರಿನ ಯೂಟ್ಯೂಬ್ ಚಾನಲ್‌ ಗೆ ಚಾಲನೆ

Update: 2020-07-08 16:15 GMT

ಮಂಗಳೂರು,ಜು.8:ಇತ್ತೀಚಿನ ಮಾಹಿತಿಯಂತೆ ನಮ್ಮ ದೇಶದಲ್ಲಿ ಬರಗಾಲ ಪೀಡಿತ ರಾಜ್ಯಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಈ ಹಿನ್ನೆಲೆಯಲ್ಲಿ ಜನ ಜಾಗೃತಿ ಮೂಡಿಸಲು ರೋಟರಿ ಜಿಲ್ಲಾ ಸಮಿತಿ ಇಂಡಿಯಾ ವಾಟರ್ ಮಿಶನ್ ಸಂಸ್ಥೆಯ ವತಿಯಿಂದ 'ವಾಟರ್ ಇಸ್ ಲೈಫ್' (ಜಲವೇ ಜೀವನ)ಎಂಬ ಯೂಟ್ಯೂಬ್ ಚ್ಯಾನಲ್‌ ಗೆ ರೋಟರಿ ಜಿಲ್ಲಾ ಗವರ್ನರ್ ರಂಗನಾಥ ಭಟ್ ನಗರದ ಖಾಸಗಿ ಹೊಟೇಲ್ ಸಭಾಂಗಣದಲ್ಲಿಂದು ಚಾಲನೆ ನೀಡಿದರು.

ರಾಷ್ಟ್ರಮಟ್ಟದಲ್ಲಿ 2002ರಲ್ಲಿ ಶೇ. 26 ಜಿಲ್ಲೆಗಳು ಬರಪೀಡಿತವಾಗಿತ್ತು. 2019ರಲ್ಲಿ ಶೇ. 42 ಜಿಲ್ಲೆಗಳು ಬರಪೀಡಿತವಾಗಿತ್ತು. ಈ ಹಿನ್ನೆಲೆಯಲ್ಲಿ  ಜಲಸಂರಕ್ಷ ಣೆಗಾಗಿ 2003ರಲ್ಲಿ ಭಾರತದ ಎಲ್ಲಾ ರೋಟರಿ ಕ್ಲಬ್ ಗಳ ಅಧ್ಯಕ್ಷರು ಮತ್ತು ಗವರ್ನರ್ ಗಳು ಸೇರಿ ಜಲಸಂರಕ್ಷಣೆ ಬಗ್ಗೆ ಯೋಜನೆ ರೂಪಿಸಿದ್ದರು. ಹಲವಾರು ಇಲಾಖೆಗಳೊಂದಿಗೆ ಕೈ ಜೋಡಿಸಿ  ಅಭಿವೃದ್ಧಿ ಕೆಲಸಗಳನ್ನು ನಡೆಸುತ್ತಿದೆ. ಈ ನಿಟ್ಟಿನಲ್ಲಿ ಪ್ರದೇಶಾಭಿವೃಧಿ, ಮಾಹಿತಿ ವಿನಿಮಯ, ಕೆರೆ ಅಭಿವೃದ್ಧಿ, ನೀರಿನ ಬಳಕೆ ಮತ್ತು ಮಳೆ ನೀರು ಕೊಯ್ಲು ಮೊದಲಾದ ಕಾರ್ಯಕ್ರಮ ನಡೆಯುತ್ತಿದೆ. ಜಲ ಸಾಕ್ಷರತೆ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ರೋಟರಿ ಜಿಲ್ಲಾ ಸಮಿತಿಯ ಅಧ್ಯಕ್ಷರು, ನಿರ್ಮಿತಿ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕರು ಆಗಿರುವ ರಾಜೇಂದ್ರ ಕಲ್ಭಾವಿಯವರ ಮುಂದಾಳತ್ವದಲ್ಲಿ "Water is Life" 2ots Youtube Channel ನ್ನು ಪ್ರಾರಂಭಿಸಲಾಗಿದೆ.ಇದು ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗೃತಿ ಮೂಡಿಸುವ  ಉದ್ದೇಶವನ್ನು ಹೊಂದಿದೆ ಎಂದು ರಾಜೇಂದ್ರ ಕಲ್ಭಾವಿ ತಿಳಿಸಿದ್ದಾರೆ.

ಯಾವ ರೀತಿಯಲ್ಲಿ ಜಲ ಸಾಕ್ಷರತಾ ಸೇವಾ ಕಾರ್ಯವನ್ನು ಕೈಗೊಳ್ಳಬಹುದೆಂದು ಮತ್ತು ನೀರು ಇಂಗಿಸುವ ಮಾಹಿತಿಯನ್ನು ನೀಡಲಾಗುವುದು. 

ಅಂತರರಾಷ್ಟ್ರೀಯ ಮಟ್ಟಕ್ಕೆ ತಲುಪಿಸುವ ಉದ್ದೇಶದಿಂದ ಈ ಯೂಟ್ಯೂಬ್ ಚ್ಯಾನಲ್ ಅನ್ನು ಪ್ರಾರಂಭಿಸಲಾಗಿದೆ. ರೋಟರಿ ಸೇವಾ ಸಂಸ್ಥೆ ಈಗಾಗಲೇ ಜಿಲ್ಲೆಯಾದ್ಯಂತ ಕೈಗೊಂಡಿರುವ ಜಲ ಸಂರಕ್ಷಣಾ ಕಾರ್ಯಕ್ರಮ ಗಳಿಗೆ ಹೆಚ್ಚಿನ ಪ್ರಚಾರ ನೀಡಿ ಬಿತ್ತರಿಸಲಾಗುವುದು ಎಂದು ಗವರ್ನರ್ ರಂಗನಾಥ ಭಟ್ ತಿಳಿಸಿದ್ದಾರೆ. 

ಈ ಯೋಜಬೆಗೆ ಸಹಕಾರ ನೀಡಲಿರುವ ವಿವಿಧ ವಲಯಗಳ ಸಹಾಯಕ ಗವರ್ನರಗಳ ಪ್ರತಿನಿಧಿಗಳಾದ  ಡಾ.ಶಿವಪ್ರಸಾದ, ಗೋಪಾಲಕೃಷ್ಣ ಶೆಟ್ಟಿ ಮೊದಲಾದವರು ಈ ಸಂದರ್ಭದಲ್ಲಿ ಉಪ ತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News