ಬಂಟ್ವಾಳ: ಬಾರ್ ಗೆ ನುಗ್ಗಿ ಮದ್ಯ ಕಳವು

Update: 2020-07-08 16:25 GMT

ಬಂಟ್ವಾಳ, ಜು. 8: ಬಾರ್ ಒಂದಕ್ಕೆ ನುಗ್ಗಿದ ಕಳ್ಳರು ಸುಮಾರು 49 ಸಾವಿರ ರೂ. ಮೌಲ್ಯದ ಮದ್ಯ ಇದ್ದ ಬಾಟ್ಲಿಗಳನ್ನು ಕಳವುಗೈದಿರುವ ಪ್ರಕರಣ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಅಡ್ಕ ಎಂಬಲ್ಲಿ ನಡೆದಿದೆ.

ಬಾರ್ ಮ್ಯಾನೇಜರ್ ನೀಡಿದ ದೂರಿನನ್ವಯ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆ ಜುಲೈ 7ರ ರಾತ್ರಿಯಿಂದ ಜುಲೈ 8ರ ಬೆಳಗ್ಗೆ 9:30ರೊಳಗೆ ನಡೆದಿದೆ. ಬಾರ್ ಕಟ್ಟಡದ ಹಿಂಭಾಗದ ಬಾಗಿಲ ಬೀಗವನ್ನು ಮುರಿದು ಒಳ ಪ್ರವೇಶಿಸಿದ ಕಳ್ಳರು ಅಂದಾಜು ಮೌಲ್ಯ 49,656 ರೂಪಾಯಿಗಳ ಮದ್ಯ ಇದ್ದ ಬಾಟಲಿಗಳನ್ನು ಕಳವುಗೈದಿರುವುದಾಗಿ ದೂರು ನೀಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News