ನವೆಂಬರ್ ವರೆಗೆ ಉಚಿತ ಪಡಿತರ: ಕೇಂದ್ರ ಸಂಪುಟ ಅಸ್ತು

Update: 2020-07-08 17:57 GMT

ಹೊಸದಿಲ್ಲಿ: ಕೊರೋನ ವೈರಸ್ ಸಾಂಕ್ರಾಮಿಕ ಹಾಗೂ ಲಾಕ್ ಡೌನ್ ನಿಂದ ಸಂತ್ರಸ್ತರಾಗಿರುವ ಹಿನ್ನೆಲೆಯಲ್ಲಿ ದೇಶದ ಕಡುಬಡವರಿಗೆ ನವೆಂಬರ್ ತಿಂಗಳವರೆಗೆ ಉಚಿತ ಪಡಿತರ ವಿತರಿಸುವ ಪ್ರಸ್ತಾವಕ್ಕೆ ಕೇಂದ್ರ ಸಚಿವ ಸಂಪುಟ ಬುಧವಾರ ಒಪ್ಪಿಗೆ ನೀಡಿದೆ.

ಪ್ರಧಾನಿ ನರೇಂದ್ರ ಮೋದಿಯವರು ಈ ಸಂಬಂಧ ಇತ್ತೀಚೆಗೆ ಮಾಡಿದ ಘೋಷಣೆಗೆ ಸಂಪುಟ ಸಭೆ ಅನುಮೋದನೆ ನೀಡಿರುವ ಬಗ್ಗೆ ವಿವರ ನೀಡಿದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವಡೇಕರ್, 81 ಕೋಟಿ ಕಡುಬಡವರಿಗೆ 5 ಕೆಜಿ ಉಚಿತ ಆಹಾರಧಾನ್ಯ ಮತ್ತು ಒಂದು ಕೆಜಿ ಬೇಳೆ ನೀಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಈ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ 1.49 ಲಕ್ಷ ಕೋಟಿ ರೂಪಾಯಿ ಹೊರೆ ಬೀಳಲಿದೆ.

ಅಂತೆಯೇ 7.4 ಕೋಟಿ ಕಡುಬಡ ಮಹಿಳೆಯರು ಮೂರು ಉಚಿತ ಎಲ್ ಪಿಜಿ ಸಿಲಿಂಡರ್ ಗಳನ್ನು ಸೆಪ್ಟೆಂಬರ್ ವರೆಗೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ಏಪ್ರಿಲ್ ಮತ್ತು ಜೂನ್ ನಲ್ಲಿ ಈ ಸೌಲಭ್ಯ ಪಡೆಯಬೇಕಿತ್ತು ಎಂದು ಅವರು ವಿವರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News