ಜು.10ರಂದು ಕೇರಳದಲ್ಲಿ ವಾಹನ ಮುಷ್ಕರ

Update: 2020-07-09 06:08 GMT

ಕಾಸರಗೋಡು, ಜು.9: ಇಂಧನ ತೈಲ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಜು.10ರಂದು ಕೇರಳ ರಾಜ್ಯಾದ್ಯಂತ ವಾಹನ ಮುಷ್ಕರ ನಡೆಯಲಿದೆ.
ವಾಹನ ಕಾರ್ಮಿಕ ಸಂಘಗಳ ಜಂಟಿ ಸಮಿತಿಯು ಈ ಮುಷ್ಕರಕ್ಕೆ ಕರೆ ನೀಡಿದ್ದು, ಬೆಳಗ್ಗೆ 6ರಿಂದ ಮಧ್ಯಾಹ್ನ 12 ಗಂಟೆ ತನಕ ಮುಷ್ಕರ ನಡೆಯಲಿದೆ.
ಇಂಧನ ತೈಲದ ಬೆಲೆ ಏರಿಕೆ ಹಿಂಪೆಡಯಬೇಕು, ಆಟೋ ಟ್ಯಾಕ್ಸಿ ಪ್ರಯಾಣ ದರ ಏರಿಕೆ ಮಾಡಬೇಕು, ಪೆಟ್ರೋಲ್, ಡೀಸೆಲ್ ದರ ನಿಗದಿಯನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಬೇಕು ಮೊದಲಾದ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News