ಜು.13: ಬ್ಯಾರಿ ಅಕಾಡಮಿಯಿಂದ ಆರು ಪುಸ್ತಕ ಮತ್ತು ಬ್ಯಾರಿ ಹಾಡಿನ ಸಿಡಿ ಬಿಡುಗಡೆ

Update: 2020-07-09 06:23 GMT

ಮಂಗಳೂರು, ಜು.9: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ವತಿಯಿಂದ ಜು.13ರಂದು ಪೂರ್ವಾಹ್ನ 11 ಗಂಟೆಗೆ ‘‘ಆರು ಪುಸ್ತಕ ಮತ್ತು ಸಿಡಿ ಬಿಡುಗಡೆ’’ ಸಮಾರಂಭವನ್ನು ಮಂಗಳೂರು ತಾಲೂಕು ಪಂಚಾಯತ್‌ನ ಹೊಸ ಕಟ್ಟಡದ 3ನೇ ಮಹಡಿಯ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಫಕ್ರುದ್ದೀನ್ ಇರುವೈಲ್ ಬರೆದ ‘ಮೂನು ಮಿನಿ ಕಾದಂಬರಿಙ’, ಅಬ್ದುಲ್ ರಹ್ಮಾನ್ ಕುತ್ತೆತ್ತೂರು ಬರೆದ ‘ಬ್ಯಾರಿ ಪಂಚತಂತ್ರ’, ಅನ್ಸಾರ್ ಕಾಟಿಪಳ್ಳ ಬರೆದ ‘ಅಂಗಲಾಪು’, ಶಂಶೀರ್ ಬುಡೋಳಿ ಬರೆದ ‘ಪಿರ್ಸತ್ತೊ ಪಲಕ’, ಹಾರೂನ್ ರಶೀದ್ ಅರ್ಕುಳ ಬರೆದ ‘ಪಾರ್‌ರೊ ಪಕ್ಕಿ’ ಹಾಗೂ ಬಿ.ಎ. ಶಂಸುದ್ದೀನ್ ಬರೆದ ‘ನೆನಪುಙ’ ಎಂಬ ಆರು ಪುಸ್ತಕಗಳು ಮತ್ತು ಬ್ಯಾರಿ ಹಾಡಿನ ‘ಕಸೊವು’ ಸಿಡಿಯನ್ನು ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಬಿಡುಗಡೆ ಮಾಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ವಹಿಸಲಿದ್ದಾರೆ. ಕೊರೋನ ಸಾಂಕ್ರಾಮಿಕ ರೋಗದ ಮುಂಜಾಗ್ರತಾ ಕ್ರಮವಾಗಿ ಈ ಕಾರ್ಯಕ್ರಮ ಅಕಾಡಮಿ ಯ ಅಧ್ಯಕ್ಷರು, ಸದಸ್ಯರು ಹಾಗೂ ಪತ್ರಿಕಾ ಮಾಧ್ಯಮದ ಸೀಮಿತ ಜನರನ್ನು ಒಳಗೊಂಡು ಸರಕಾರದ ನಿಯಮಾನುಸಾರ ನಡೆಯಲಿದೆ. ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ ಎಂದು ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News