ಜನರಿಗೆ ವಿಷಕಾರಿ ಚುಚ್ಚುಮದ್ದು ನೀಡುತ್ತಿದ್ದಾರೆ ಎಂದು ಆರೋಪಿಸುವ ಯುವತಿ ನರ್ಸ್ ಅಲ್ಲ, ಪಾಕ್ ನ ಟಿಕ್ ಟಾಕ್ ಸ್ಟಾರ್

Update: 2020-07-09 06:50 GMT

ಹೊಸದಿಲ್ಲಿ : ನರ್ಸ್ ರೀತಿ  ಬಟ್ಟೆ ಧರಿಸಿ ಯುವತಿಯೊಬ್ಬಳು ಕೋವಿಡ್-19 ಕುರಿತಂತೆ  ತಪ್ಪು ಮಾಹಿತಿ ನೀಡಿ ಜನರಿಗೆ ಆಸ್ಪತ್ರೆಗೆ ಹೋಗದಂತೆ ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಮುಖಕ್ಕೆ ಮಾಸ್ಕ್ ಕೂಡ ಧರಿಸಿರುವ ಈಕೆ  ಯಾವುದೇ ಕಾರಣಕ್ಕೂ ಆಸ್ಪತ್ರೆಗೆ ಹೋಗಬೇಡಿ ಎಂದು ಜನರಿಗೆ ಮನವಿ ಮಾಡುತ್ತಾಳೆ. ಇದು ಸಾಲದೆಂಬಂತೆ ತನ್ನ ಕಣ್ಣೆದುರೇ ಆರು ಜನರಿಗೆ ವಿಷಕಾರಿ ಚುಚ್ಚುಮದ್ದು ನೀಡಲಾಗಿದೆ ಎಂದು ಆಕೆ ಹೇಳಿಕೊಂಡಿದ್ದಾಳಲ್ಲದೆ ತನ್ನ ವೀಡಿಯೋ ವೈರಲ್ ಮಾಡುವ ಉದ್ದೇಶದಿಂದ ಇನ್ನೂ ಹಲವಾರು ಸುಳ್ಳು ಆಪಾದನೆಗಳನ್ನು ಮಾಡಿದ್ದಾಳೆ. ಈ ವೀಡಿಯೋ ಭಾರತದ ವಾಟ್ಸ್ಯಾಪ್ ಗ್ರೂಪ್‍ ಗಳಲ್ಲಿ ವೈರಲ್ ಆಗಿದೆ.

ವಾಸ್ತವವೇನು?

ಈ ವೀಡಿಯೋ ಮೊದಲು ಫೇಸ್ ಬುಕ್ ಐಡಿ ಅಲಿಶ್ಬಾ ಇಸ್ಲಾಂ ಎಂಬ ಖಾತೆಯಿಂದ ಪೋಸ್ಟ್ ಆಗಿತ್ತು. ಆ ಖಾತೆ ಹೊಂದಿದಾಕೆ ತನ್ನನ್ನು ವೈದ್ಯೆ ಎಂದು ಪರಿಚಯಿಸಿದ್ದರೂ  ತಾನೆಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಆಕೆ ಹೇಳಿಲ್ಲ. ಆದರೆ ಆ ಖಾತೆಯ ಪೋಸ್ಟ್‍ ಗಳನ್ನು ಪರಿಶೀಲಿಸಿದಾಗ ಇದೊಂದು ನಕಲಿ ಫೇಸ್ ಬುಕ್ ಖಾತೆ ಎಂದು ಸ್ಪಷ್ಟವಾಗುತ್ತದೆ.

ವೈರಲ್ ವೀಡಿಯೋದಲ್ಲಿ ಕಾಣಿಸಿರುವ ಯುವತಿಯನ್ನು ಟಿಕ್ ಟಾಕ್ ಸ್ಟಾರ್ ರೂಬಿ ಅಲಿ ಎಂದು ಪಾಕಿಸ್ತಾನದ ಹಲವು ಸುದ್ದಿ ಮಾದ್ಯಮಗಳು ಗುರುತಿಸಿವೆ. ಆಕೆ ಕೆಲ ತಿಂಗಳುಗಳ ಹಿಂದೆ ವೈದ್ಯೆಯಂತೆ  ತೋರ್ಪಡಿಸಿಕೊಂಡು ವೀಡಿಯೋ ಮಾಡಿದ್ದಳು. ಈ ಬಗ್ಗೆ ನರ್ಸ್ ಎಂದು ಬಿಂಬಿಸಿ ಆಕೆ ಜನರ ದಾರಿ ತಪ್ಪಿಸುತ್ತಿದ್ದಾಳೆ ಎಂದು ಕೂಡ ಪಾಕಿಸ್ತಾನದ ಹಲವು ಮಾಧ್ಯಮಗಳು ವರದಿ ಮಾಡಿವೆ.

ಮೊದಲನೆಯದಾಗಿ ಈ ವಿಡಿಯೋ ಭಾರತದ್ದಲ್ಲ, ಎರಡನೆಯದಾಗಿ ಈ ವಿಡಿಯೋದಲ್ಲಿರುವಾಕೆ ನರ್ಸ್ ಅಲ್ಲ ಬದಲಾಗಿ ಪಾಕಿಸ್ತಾನದ ಟಿಕ್ ಟಾಕ್ ಸ್ಟಾರ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News