ಪುತ್ತೂರು: ಮತ್ತಿಬ್ಬರಲ್ಲಿ ಕೊರೋನ ಪಾಸಿಟಿವ್

Update: 2020-07-09 07:18 GMT

ಪುತ್ತೂರು, ಜು.9: ಪುತ್ತೂರಿನ ನಗರಸಭಾ ಮತ್ತು ಗ್ರಾಮಾಂತರ ವ್ಯಾಪ್ತಿಯಲ್ಲಿ ಗುರುವಾರ ತಲಾ ಒಂದೊಂದು ಕೊರೋನ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದೆ.

ನಗರಸಭಾ ವ್ಯಾಪ್ತಿಯ ಬೊಳುವಾರು ಮಿಷನ್ ಗುಡ್ಡೆ ನಿವಾಸಿ 56 ವರ್ಷದ ಮಹಿಳೆ ಅನಾರೋಗ್ಯದ ಕಾರಣದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರಲ್ಲಿ ಕೊರೋನ ಸೋಂಕು ದೃಢಪಟ್ಟಿದೆ. ಗ್ರಾಮೀಣ ಪ್ರದೇಶವಾದ ಈಶ್ವರಮಂಗಲ ನಿವಾಸಿ 55 ವರ್ಷ ಪ್ರಾಯದ ವ್ಯಕ್ತಿಯೊಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಜ್ವರದ ಹಿನ್ನೆಲೆಯಲ್ಲಿ ದಾಖಲಾಗಿದ್ದರು. ಅವರ ಗಂಟಲು ದ್ರವದ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಕೊರೋನ ದೃಢಪಟ್ಟ ಇವರಿಬ್ಬರ ಮನೆಗಳನ್ನು ಸೀಲ್‌ಡೌನ್ ಮಾಡಲಾಗಿದೆ.

ಪುತ್ತೂರಿನ ಸರಕಾರಿ ಆಸ್ಪತ್ರೆಯಲ್ಲೂ ಕೋವಿಡ್ ವಾರ್ಡ್ ತೆರೆಯಲಾಗಿದ್ದು ಇಬ್ಬರು ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಪುತ್ತೂರು ಸರಕಾರಿ ಆಸ್ಪತ್ರೆಯ ಅಡುಗೆ ತಯಾರಿಕ ಕೋಡಿಂಬಾಡಿ ಗ್ರಾಮದ ಶಾಂತಿ ನಗರ ನಿವಾಸಿಗೆ ಕೊರೋನ ನೆಗೆಟಿವ್ ವರದಿಯಾದ ಹಿನ್ನೆಲೆಯಲ್ಲಿ ಮಂಗಳೂರು ಕೋವಿಡ್ ವೆನ್‌ಲಾಕ್ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News