ದಿಲ್ಲಿಯಲ್ಲಿ ಸೋಂಕಿತರಿಗಿಂತ ಗುಣಮುಖರಾದವರ ಸಂಖ್ಯೆಯಲ್ಲಿ ಹೆಚ್ಚಳ

Update: 2020-07-09 07:25 GMT

ಹೊಸದಿಲ್ಲಿ, ಜು.9: ಕಳೆದ 7 ದಿನಗಳಿಂದ ದಿಲ್ಲಿಯಲ್ಲಿ ನೊವೆಲ್ ಕೊರೋನ ವೈರಸ್ ಕಾಯಿಲೆಯಿಂದ ಗುಣಮುಖವಾಗುತ್ತಿರುವ ಜನರ ಸಂಖ್ಯೆಯು ಸೋಂಕಿತರಿಗಿಂತ ಅಧಿಕವಾಗಿದೆ. ಬುಧವಾರ ಗುಣಮುಖವಾಗಿರುವವರು ಹಾಗೂ ಸೋಂಕಿತರ ಸಂಖ್ಯೆಯಲ್ಲಿ ಸುಮಾರು 2,000 ವ್ಯತ್ಯಾಸ ಕಂಡುಬಂದಿದೆ. 3,982 ಜನರು ಗುಣಮುಖರಾಗಿದ್ದರೆ, 2033 ಜನರು ಸೋಂಕಿತರಾಗಿದ್ದಾರೆ.

ಜೂನ್ 23ರಂದು ದಿಲ್ಲಿಯಲ್ಲಿ ಸೋಂಕಿತರ ಸಂಖ್ಯೆ ಉನ್ನತಮಟ್ಟದಲ್ಲಿತ್ತು. ಆಗ ದಿಲ್ಲಿಯೊಂದರಲ್ಲೇ 3,947 ಜನರು ಸೋಂಕಿತರಾಗಿದ್ದರು.ಆ ನಂತರ ಪ್ರತಿ ದಿನ ಹೊಸ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಾ ಬಂದಿದೆ. ಸೋಮವಾರ ಕೇವಲ 1,379 ಕೇಸ್‌ಗಳು ಪತ್ತೆಯಾಗಿವೆ.

ಮತ್ತೊಂದೆಡೆ,ಎರಡರಿಂದ ಮೂರು ವಾರಗಳ ಹಿಂದೆ ದಿಲ್ಲಿಯಲ್ಲಿ ಹೆಚ್ಚು ಕೊರೋನ ಕೇಸ್‌ಗಳು ವರದಿಯಾಗುತ್ತಿದ್ದ ಸಂದರ್ಭದಲ್ಲಿ ಸೋಂಕಿತರಾಗಿದ್ದ ಜನರು ಇದೀಗ ಗುಣಮುಖರಾಗುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News