30 ವರ್ಷಗಳಿಂದ ದಟ್ಟಾರಣ್ಯದ ನಡುವೆ 15 ಕಿ.ಮೀ. ನಡೆದು ಅಂಚೆ ತಲುಪಿಸುತ್ತಿದ್ದ ಪೋಸ್ಟ್ ಮ್ಯಾನ್ ಗೆ ಭಾರೀ ಮೆಚ್ಚುಗೆ

Update: 2020-07-09 08:13 GMT

ಚೆನ್ನೈ : ತಮಿಳುನಾಡಿನ ಪೋಸ್ಟ್ ಮ್ಯಾನ್ ಒಬ್ಬರನ್ನು ಅವರ ನಿಷ್ಠಾವಂತ ಸೇವೆಗಾಗಿ ‘ಹೀರೋ’ ಎಂದು ಜನರು ಕೊಂಡಾಡುತ್ತಿದ್ದಾರೆ. ಕಳೆದ ವಾರ ಸೇವೆಯಿಂದ ನಿವೃತ್ತರಾದ ಡಿ ಶಿವನ್ ಅಂಚೆಗಳನ್ನು ಜನರಿಗೆ ತಲುಪಿಸಲು ದಟ್ಟಾರಣ್ಯಗಳ ನಡುವೆ ಸುಮಾರು 30 ವರ್ಷಗಳಿಂದ 15 ಕಿ.ಮೀ. ಸಂಚರಿಸುತ್ತಿದ್ದರೆಂಬ ಅಂಶವೇ ಅವರಿಗೆ ದೊರೆತಿರುವ ಈ ಶ್ಲಾಘನೆಗೆ ಕಾರಣ.

ಸಿಂಗಾರ ಹಾಗೂ ಮರಪಲ್ಲಂ ಸಮೀಪದ ಅರಣ್ಯಗಳಲ್ಲಿ  ನೆಲೆಸಿರುವ ಜನರಿಗೆ ಅಂಚೆ ಹಾಗೂ ಪಿಂಚಣಿ ತಲುಪಿಸಲು ಅವರು  ಕೂನೂರ್ ಸಮೀಪದ ಹಿಲ್‍ ಗ್ರೋವ್ ಅಂಚೆ ಕಚೇರಿಯಿಂದ 15 ಕಿ.ಮೀ. ದೂರ ನಡೆದುಕೊಂಡು ಹೋಗುತ್ತಿದ್ದರು. ಹೀಗೆ ದಟ್ಟಾರಣ್ಯಗಳ ನಡುವೆ ಹಾದು ಹೋಗುವಾಗ ಅವರು ಆನೆಗಳು, ಕರಡಿಗಳ ಸಹಿತ ಅನೇಕ ಕಾಡು ಪ್ರಾಣಗಳನ್ನು ಎದುರಿಸಬೇಕಾಗಿ ಬಂದಿದ್ದರೂ ಆ ಭಯ ಅವರ ಕರ್ತವ್ಯಕ್ಕೆ ಯಾವುದೇ ಅಡ್ಡಿಯುಂಟು ಮಾಡಿರಲಿಲ್ಲ.

ಶಿವನ್ ಅವರ ನಿವೃತ್ತಿಯ ನಂತರ ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಶಿವನ್ ದಟ್ಟಾರಣ್ಯಗಳ ನಡುವೆ ನಡೆದುಕೊಂಡು ಹೋಗುತ್ತಿರುವ ಚಿತ್ರ ಪೋಸ್ಟ್ ಮಾಡಿ ಹೀಗೆ ಬರೆದಿದ್ದಾರೆ- ``ಪೋಸ್ಟ್ ಮ್ಯಾನ್ ಡಿ ಶಿವನ್ ಅವರು ಪ್ರತಿ ದಿನ ದಟ್ಟಾರಣ್ಯಗಳ ನಡುವೆ 15 ಕಿಮೀ  ನಡೆದು ಕೂನೂರಿನ  ಹಲವು ದೂರದ ಪ್ರದೇಶಗಳಿಗೆ ಅಂಚೆ ಬಟವಾಡೆ ಮಾಡಿದ್ದಾರೆ. ಆನೆಗಳು, ಕರಡಿಗಳು, ಕಾಡೆಮ್ಮೆಗಳು ಅಟ್ಟಾಡಿಸಿದರೂ  ನದಿ ತೊರೆ, ಝರಿಗಳ ಪ್ರದೇಶಗಳನ್ನು ದಾಟಿ ಅವರು 30 ವರ್ಷಗಳ ಕಳೆದ ವಾರ ನಿವೃತ್ತರಾಗುವ ತನಕ ಕಾಲ ಅತ್ಯಂತ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ್ದಾರೆ”.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News