ಟಿಕ್‌ಟಾಕ್ ಮಾದರಿ ಮೊಬೈಲ್ ಆ್ಯಪ್ ‘ವಾಟ್ಸ್‌ಕಟ್ ಪ್ರೊ’: ಪಿ.ಎ.ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಾಧನೆ

Update: 2020-07-09 10:13 GMT

ಮಂಗಳೂರು, ಜು.9: ನಡುಪದವಿನ ಪಿ.ಎ. ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಹಳೆಯ ವಿದ್ಯಾರ್ಥಿಗಳ ತಂಡವು ಟಿಕ್‌ಟಾಕ್ ಮಾದರಿಯ ಸ್ವದೇಶಿ ಮೊಬೈಲ್ ಆ್ಯಪ್‌ವೊಂದನ್ನು ಸಿದ್ಧಪಡಿಸಿದ್ದಾರೆ.

‘ವಾಟ್ಸ್‌ಕಟ್ ಪ್ರೊ’ ಹೆಸರಿನ ಈ ಕಿರು ವೀಡಿಯೊ ಅಪ್ಲಿಕೇಶನ್‌ನ್ನು ಪಿ.ಎ.ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಕಂಪ್ಯೂಟರ್ ಸೈನ್ಸ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳಾದ ಸುಶಿನ್ ಪಿ.ವಿ, ರಿಝ್ವ್ವಾನ್ ಸದಾತ್ ಮತ್ತು ರಮೀಸ್ ಪಿ. ಸಿದ್ಧಪಡಿಸಿದ್ದಾರೆ. ಇವರಿಗೆ ಎಸ್‌ಪಿಜೆಐಎಂಆರ್ ಮುಂಬೈನ ಹಳೆಯ ವಿದ್ಯಾರ್ಥಿ ವಿಕಾಸ್ ಶ್ರೀವಾಸ್ತವ ಸಾಥ್ ನೀಡಿದ್ದಾರೆ

ಸದ್ಯ ಈ ಆ್ಯಪ್ 1.7 ಮಿಲಿಯನ್‌ಗೂ ಅಧಿಕ ಡೌನ್‌ಲೋಡ್‌ಗಳನ್ನು ಹೊಂದಿದೆ ಮತ್ತು ಅದರ ಪ್ಲಾಟ್‌ಫಾರ್ಮ್ ನಲ್ಲಿ 9 ಮಿಲಿಯನ್‌ಗಿಂತಲೂ ಹೆಚ್ಚು ಸ್ಟೋರೀಸ್ ಹಂಚಿಕೊಳ್ಳಲಾಗಿದೆ. ವಾಟ್ಸ್ ಆ್ಯಪ್, ಇನ್‌ಸ್ಟಾಗ್ರಾಮ್, ಫೇಸ್‌ಬುಕ್, ಮತ್ತು ಐಎಂಒ ಸೇರಿದಂತೆ ಅನೇಕ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳು ಮತ್ತು ಚಾಟ್ ಮೆಸೆಂಜರ್‌ಗಳಲ್ಲಿ ವೀಡಿಯೊಗಳು / ಆಡಿಯೊಗಳನ್ನು ರಚಿಸಲು ಮತ್ತು ಹಂಚಿಕೊಳ್ಳಲು ಇದು ಅತ್ಯಂತ ಸುಧಾರಿತ ಅಪ್ಲಿಕೇಶನ್ ಆಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕಾಲೇಜಿನ ಪ್ರಕಟನೆ ತಿಳಿಸಿದೆ.

ಸಂಸ್ಥೆಯ ಹಳೆವಿದ್ಯಾರ್ಥಿಗಳ ಸಾಧನೆಗೆ ಪಿಎ ಎಜುಕೇಶನಲ್ ಟ್ರಸ್ಟ್ ಚೆಯರ್‌ಮ್ಯಾನ್ ಡಾ.ಪಿ.ಎ.ಇಬ್ರಾಹೀಂ ಹಾಜಿ, ಕಾರ್ಯನಿರ್ವಾಹಕ ನಿರ್ದೇಶಕರಾದ ಅಬ್ದುಲ್ಲಾ ಇಬ್ರಾಹೀಂ, ಪ್ರಾಂಶುಪಾಲರು ಮತ್ತು ಎಲ್ಲ ವಿಭಾಗ ಮುಖ್ಯಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News