ಪುತ್ತೂರು: ಕೃಷಿ ಸಾಲ ಮನ್ನಾ ಯೋಜನೆಯ ಬಾಕಿ ಹಣ ಬಿಡುಗಡೆಗೆ ಮನವಿ

Update: 2020-07-09 12:01 GMT

ಪುತ್ತೂರು: ಕುಮಾರಸ್ವಾಮಿ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕೃಷಿ ಸಾಲಮನ್ನಾ ಯೋಜನೆಯಡಿ ಮಂಜೂರಾದ ಹಣದ ಪೈಕಿ ಬಾಕಿಯಾಗಿರುವ ಹಣವನ್ನು ಬಿಡುಗಡೆ ಮಾಡುವಂತೆ ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾದ ಡಾ. ಎಂ.ಎನ್ ರಾಜೇಂದ್ರ ಕುಮಾರ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. 

ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ವ್ಯಾಪ್ತಿಯಲ್ಲಿ ಕುಮಾರ ಸ್ವಾಮಿ ನೇತ್ರತ್ವದ ಸರಕಾರದ ರೂ. 1 ಲಕ್ಷ ಸಾಲ ಮನ್ನಾ ಯೋಜನೆಯಲ್ಲಿ 434 ಫಲಾನುಭವಿಗಳನ್ನು ಗುರುತಿಸಿದ್ದು, ಇದರಲ್ಲಿ ಹಂತ ಹಂತವಾಗಿ 304 ಸದಸ್ಯರಿಗೆ ಮನ್ನಾ ಯೋಜನೆಯ ಹಣ ಬಿಡುಗಡೆಯಾಗಿರುತ್ತದೆ. ಇನ್ನು ಉಳಿಕೆ 130 ಜನರಿಗೆ ಸಾಲ ಮನ್ನಾ ಬಿಡುಗಡೆಯಾಗದೆ ಬಾಕಿ ಉಳಿದಿದ್ದು ಒಂದೇ ಕುಟುಂಬದ ಸದಸ್ಯರೆಂದು, ಪಿಂಚಣಿದಾರರೆಂದು, ಆದಾಯ ತೆರಿಗೆ ಪಾವತಿದಾರರೆಂದು ಹಾಗೂ ಬೇರೆ ಬೇರೆ ಕಾರಣಗಳಿಂದಾಗಿ ಇದರಲ್ಲಿ 41 ಫಲಾನುಭವಿಗಳನ್ನು ಕೈ ಬಿಡಲಾಗಿರುತ್ತದೆ. ಸರಕಾರದ ಸಾಲ ಮನ್ನಾ ಯೋಜನೆಯ ಕಠಿಣ  ಶರತ್ತಿನಿಂದಾಗಿ ರೈತರು ಸಾಲ ಮನ್ನಾ ಸೌಲಭ್ಯದಿಂದ ವಂಚಿತರಾಗಿರುತ್ತಾರೆ. ಸಹಕಾರಿ ಸಂಘದ ಎಲ್ಲಾ ಅರ್ಹ ರೈತ ಸದಸ್ಯರಿಗೆ ಸಾಲ ಮನ್ನಾ ಯೋಜನೆ ಸಿಗುವಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಆಗ್ರಹಿಸಲಾಯಿತು. 

ಆರ್ಯಾಪು ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಹೆಚ್. ಮಹಮ್ಮದ್ ಆಲಿ ಅವರು ಮನವಿ ಸಲ್ಲಿಸಿದರು. ಈ ಸಂಧರ್ಭದಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿ ಕುಮಾರ್ ರೈ ಬಾಲ್ಯೊಟ್ಟು, ಎಸ್.ಬಿ ಜಯರಾಮ ರೈ ಬಳಜ್ಜ, ಕೇಂದ್ರ ಸಹಕಾರಿ ಯೂನಿಯನ್  ನಿರ್ದೇಶಕರಾದ ರಾಜಶೇಖರ ಜೈನ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News