ಉಡುಪಿ: ವಿಕಲಚೇತನರಿಗೆ ಸಾಧನ ಸಲಕರಣೆ ವಿತರಿಸುವ ಶಿಬಿರ ಮುಂದೂಡಿಕೆ
Update: 2020-07-09 17:51 IST
ಉಡುಪಿ, ಜು.9: ಸುರತ್ಕಲ್ ಎಂಆರ್‌ಪಿಎಲ್‌ನ ಸಿಎಸ್‌ಆರ್ ನಿಧಿಯ ಧನ ಸಹಾಯದಿಂದ ಅಲಿಮ್ಕೋ ಎಸಿಸಿ ಬೆಂಗಳೂರು ಇವರ ಮೂಲಕ ಉಡುಪಿ ಜಿಲ್ಲಾ ಅಂಗವಿಕಲರ ಸಬಲೀಕರಣ ಇಲಾಖೆಯ ಸಹಯೋಗ ದೊಂದಿಗೆ ಉಡುಪಿ ಜಿಲ್ಲಾ ಅಂಗವಿಕಲರಿಗೆ ಸಾಧನ ಸಲಕರಣೆಯನ್ನು ವಿತರಿಸಲು ಆಯೋಜಿಸಲಾಗಿದ್ದು ಶಿಬಿರವನ್ನು ಮುಂದೂಡಲಾಗಿದೆ.
ಪ್ರಸ್ತುತ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ವೈರಸ್ ಹರಡುವುದು ಹೆಚ್ಚುತ್ತಿರುವುದರಿಂದ ಹಾಗೂ ವಿಕಲಚೇತನರಿಗೆ ತೊಂದರೆಯಾಗಬಾರದೆಂಬ ಕಾರಣದಿಂದ ಶಿಬಿರವನ್ನು ಮುಂದೂಡಲಾಗಿದೆ. ಶಿಬಿರದ ಮುಂದಿನ ದಿನಾಂಕ ವನ್ನು ಶೀಘ್ರವೇ ತಿಳಿಸಲಾಗುವುದು ಎಂದು ಉಡುಪಿ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಚಂದ್ರ ನಾಯ್ಕಾ ತಿಳಿಸಿದ್ದಾರೆ.