​ಅರಬ್ಬಿ ಸಮುದ್ರದಲ್ಲಿ ಅಲೆಗಳ ಆರ್ಭಟ: ಜು.14ರವರೆಗೆ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ

Update: 2020-07-09 12:28 GMT
ಫೈಲ್ ಚಿತ್ರ

ಮಂಗಳೂರು, ಜು.9: ಅರಬ್ಬಿ ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಭಾರೀ ಪ್ರಮಾಣದಲ್ಲಿ ಅಲೆಗಳು ಆರ್ಭಟಿಸುತ್ತಿವೆ. ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಕಟ್ಟೆಚ್ಚರ ಘೋಷಿಸಿದೆ.

ಅರಬ್ಬಿ ಸಮುದ್ರದಲ್ಲಿ ಸದ್ಯ ಮೂರರಿಂದ 3.3 ಮೀಟರ್‌ವರೆಗಿನ ಭಾರೀ ಗಾತ್ರದ ಅಲೆಗಳು ಕಡಲ ತೀರಕ್ಕೆ ಅಪ್ಪಳಿಸುತ್ತಿವೆ. ಗುರುವಾರ ಬೆಳಗ್ಗೆ 11:30ರಿಂದಲೇ ಅಲೆಗಳು ಅಪಾಯವನ್ನು ಸೂಚಿಸುತ್ತಿದ್ದು, ಗುರುವಾರ ಬೆಳಗ್ಗಿನವರೆಗೂ ಸಮುದ್ರದಲ್ಲಿ ಇದೇ ಪರಿಸ್ಥಿತಿ ಇರಲಿದೆ. ಕಡಲಿನ ಮೇಲ್ಮೈ ಪ್ರಸ್ತುತ ಅಲೆಗಳ ವೇಗವು ಸೆಕೆಂಡ್‌ಗೆ 43ರಿಂದ 57 ಸೆಂ.ಮೀ. ಇದೆ.

ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿದ್ದು, ಮೀನುಗಾರರು ಯಾವುದೇ ಕಾರಣಕ್ಕೂ ಕಡಲಿಗೆ ಇಳಿಯಬಾರದು. ಸಮುದ್ರದ ಅಂಚು, ನದಿ ಪಾತ್ರದಲ್ಲಿರುವವರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕರಾವಳಿ ಕರ್ನಾಟಕದ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆ ಇದೆ. ಜು.10ರಂದು ಬೆಳಗ್ಗೆ 8:30ರಿಂದ 24 ಗಂಟೆವರೆಗೆ 115 ಮಿ.ಮೀ.ವರೆಗೂ ಮಳೆಯಾಗಲಿದೆ. ಜು.11ರಿಂದ 14ರವರೆಗೆ 65 ಮಿ.ಮೀ. ಮಳೆ ಬೀಳುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News