ಕಟೀಲು ದೇವಸ್ಥಾನದ ಕುರಿತು ಯೂಟ್ಯೂಬ್ ವರದಿ: ಗಿಳಿಯಾರು ಸೇರಿ ಮೂವರಿಗೆ ನಿರೀಕ್ಷಣಾ ಜಾಮೀನು

Update: 2020-07-09 12:31 GMT

ಉಡುಪಿ, ಜು.8: ಕಟೀಲು ದೇವಸ್ಥಾನದ ಆಡಳಿತ ವೈಫಲ್ಯ ಹಾಗೂ ಅಲ್ಲಿ ಹಣ ದುರುಪಯೋಗದ ಕುರಿತಂತೆ ಯೂಟ್ಯೂಬ್ ಪಬ್ಲಿಕ್ ಮಿರರ್ ಚಾನೆಲ್ ಮೂಲಕ ಸಾರ್ವಜನಿಕವಾಗಿ ವರದಿ ಪ್ರಸಾದ ಮಾಡಿರುವ ಪತ್ರಕರ್ತ ವಸಂತ ಗಿಳಿಯಾರು ಹಾಗೂ ಇತರರ ವಿರುದ್ಧ ಮುಲ್ಕಿ ಮತ್ತು ಬಜ್ಪೆ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿರುವ ಎರಡು ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೂವರಿಗೆ ಮಂಗಳೂರಿನ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಇದರ ವಿರುದ್ಧ ವಸಂತ ಗಿಳಿಯಾರ್ ಹಾಗೂ ಇತರರು ಮಂಗಳೂರಿನ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ವಿಚಾರಣೆ ನಡೆಸಿ ಎರಡೂ ಕಡೆಗಳ ವಾದ ಆಲಿಸಿದ ಮೂರನೇ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಇದರಿಂದ ಯಾವುದೇ ಭಕ್ತಾದಿಗಳ ಧಾರ್ಮಿಕ ಭಾವನೆಗೆ ಧಕ್ಕೆಯಾಗಿಲ್ಲ ಎಂದು ಪರಿಗಣಿಸಿ ಎರಡೂ ಪ್ರಕರಣಗಳಲ್ಲಿ ಮೂವರಿಗೂ ನಿರೀಕ್ಷಣಾ ಜಾಮೀನನ್ನು ನೀಡಿ ಆದೇಶಿಸಿದ್ದಾರೆ.

ಪ್ರಕರಣದಲ್ಲಿ ಮೂವರು ಆರೋಪಿತರ ಪರವಾಗಿ ಉಡುಪಿಯ ನ್ಯಾಯವಾದಿಗಳಾದ ಆರೂರು ಸುಕೇಶ್ ಶೆಟ್ಟಿ, ಗಿರೀಶ್ ಎಸ್‌ಪಿ ಏಳಿಂಜೆ ಹಾಗೂ ಸಂತೋಷ್‌ಕುಮಾರ್ ಮೂಡುಬೆಳ್ಳೆ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News