ಬೆಳ್ತಂಗಡಿ: ಕ್ವಾರಂಟೈನ್ ಕೇಂದ್ರದ ಸುತ್ತ ಪೂರ್ವಸಿದ್ಧತೆಗೆ ಮನವಿ

Update: 2020-07-09 13:06 GMT

ಬೆಳ್ತಂಗಡಿ: ಉಜಿರೆ ಟಿ.ಬಿ ಆಸ್ಪತ್ರೆಯನ್ನು ತುರ್ತು ಅವಶ್ಯಕತೆಗಾಗಿ ಕ್ವಾರೆಂಟೈನ್ ಕೇಂದ್ರವಾಗಿ ಉಪಯೋಗಿಸಲು ಶ್ರೀಕ್ಷೇತ್ರ ಧರ್ಮಸ್ಥಳದ ವತಿಯಿಂದ ನೀಡಿದ್ದು ಇದರಂತೆ ಜಿಲ್ಲಾಧಿಕಾರಿಗಳು, ಶಾಸಕ ಹರೀಶ್ ಪೂಂಜಾ ಹಾಗೂ ತಾಲೂಕು ಆಡಳಿತ ತುರ್ತು ಅಗತ್ಯಕ್ಕಾಗಿ ಟಿ.ಬಿ ಆಸ್ಪತ್ರೆಯನ್ನು ಕ್ವಾರಂಟೈನ್ ಕೇಂದ್ರವನ್ನಾಗಿಸಲು ಸಿದ್ಧತೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ತಿಳಿದು ಸ್ಥಳೀಯರು ಇದರ ಸುತ್ತಮುತ್ತ ಚರಂಡಿ ವ್ಯವಸ್ಥೆ ಸರಿಪಡಿಸಬೇಕು. ಆಸ್ಪತ್ರೆಯ ನೀರು ಹೊರಗಡೆ ಹರಿಯುತ್ತಿದೆ ಅದನ್ನು ಸರಿಪಡಿಸಬೇಕು ಮತ್ತು ಕೇಂದ್ರಕ್ಕೆ ಸೂಕ್ತವಾದ ಭದ್ರತೆ ಒದಗಿಸಬೇಕು ಎಂದು ಗುರುವಾರ ಬೆಳ್ತಂಗಡಿ ಠಾಣೆಗೆ ಮನವಿ ಮಾಡಿದ್ದಾರೆ.  

ಜಿಲ್ಲಾಧಿಕಾರಿಗಳ ಆದೇಶದಂತೆ ಟಿ.ಬಿ ಆಸ್ಪತ್ರೆಯನ್ನು ಕ್ವಾರೆಂಟೈನ್ ಕೇಂದ್ರವಾಗಿ ಮಾಡಲು ಸೂಚಿಸಿದ್ದು ಇದರಂತೆ ನಾನು ಮತ್ತು ತಾಲೂಕು ವೈದ್ಯಾಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವರದಿ ನೀಡಿದ್ದೇವೆ. ಸ್ಥಳಿಯರು ಕೆಲವರು ವಿರೋಧ ವ್ಯಕ್ತಪಡಿಸಿದ್ದು ಇಲ್ಲಿ ಸ್ಥಳೀಯರಿಗೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಹಶಿಲ್ದಾರ್ ಮಹೇಶ್ ಜೆ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News