ಬೆಳ್ತಂಗಡಿ: ಒಂದೇ ಕುಟುಂಬದ ನಾಲ್ವರು ಸೇರಿದಂತೆ 6 ಮಂದಿಗೆ ಕೊರೋನ ಪಾಸಿಟಿವ್

Update: 2020-07-09 15:18 GMT

ಬೆಳ್ತಂಗಡಿ: ತಾಲೂಕಿನಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿದಂತೆ ಆರು ಮಂದಿಗೆ ಕೊರೋನ ಸೋಂಕು ದೃಢಪಟ್ಟಿದೆ. ಪಾರೆಂಕಿ ಗ್ರಾಮದ ಒಂದೇ ಕುಟುಂಬದ ನಾಲ್ಕು ಮಂದಿಗೆ ಕೊರೋನ ಪಾಸಿಟಿವ್ ಆಗಿರುವುದು ದೃಢವಾಗಿದೆ.

ಕೆಲವು ದಿನಗಳ ಹಿಂದೆ ಪಾರೆಂಕಿ ಗ್ರಾಮದ ಮೀನು ಮಾರಾಟ ಮಾಡುತ್ತಿದ್ದ ಓರ್ವ ಪುರುಷರಿಗೆ ಕೊರೋನ ಪಾಸಿಟಿವ್ ಆಗಿದ್ದು, ಆ ಪೈಕಿ ಅವರ ಸಂಬಂಧಿಕರ ಮನೆಯ ಇಬ್ಬರು ಮಹಿಳೆಯರು , ಇಬ್ಬರು ಪುರುಷರ ಗಂಟಲು ದ್ರವ ಪರೀಕ್ಷೆ ಮಾಡಲಾಗಿದ್ದು ಇದರ ವರದಿ ಗುರುವಾರ ಬಂದಿದ್ದು ನಾಲ್ಕು ಜನರಿಗೂ ಸೋಂಕು ದೃಢಪಟ್ಟಿದೆ

ತಾಲೂಕಿನ ನಾರಾವಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಂಜುನಗರ ನಿವಾಸಿಯೊಬ್ಬರಿಗೆ ಕೊರೋನ ಸೋಂಕು ತಗುಲಿರುವುದು ದೃಢವಾಗಿದೆ. ಮಂಗಳೂರು ಹೊಟೇಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಇವರು, ಒಂದು ವಾರದ ಹಿಂದೆ ಮನೆಗೆ ಬಂದಿದ್ದರು. ಮನೆಯನ್ನು ಸೀಲ್ ಡೌನ್ ಮಾಡಲಾಗಿದೆ.

ಮರೋಡಿ ಗ್ರಾಮದ (50) ವರ್ಷ ಪ್ರಾಯದ ಪುರುಷನಿಗೂ ಕೊರೋನ ಸೋಂಕು ದೃಡಪಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News