ವಿಟ್ಲ: ಕೋವಿಡ್-19 ನಿರ್ವಹಣೆ-ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಶಿಬಿರ

Update: 2020-07-09 16:42 GMT

ವಿಟ್ಲ: ಉಕ್ಕುಡ ಬದ್ರಿಯಾ ಜುಮಾ ಮಸೀದಿ, ಮುರ್ಶಿದುಲ್ ಅನಾಮ್ ಸ್ವಲಾತ್ ಕಮಿಟಿ ಮತ್ತು ವಿಟ್ಲ-ಪುತ್ತೂರು ಟೋಪ್ಕೋ ಜ್ಯುವೆಲ್ಲರಿ ವತಿಯಿಂದ ಕೋವಿಡ್-19 ನಿರ್ವಹಣೆ-ಸಾಮಾಜಿಕ ಕಾರ್ಯಕರ್ತರಿಗೆ ತರಬೇತಿ ಶಿಬಿರ ಉಕ್ಕುಡ ಮದ್ರಸ ಸಭಾಂಗಣದಲ್ಲಿ ಗುರುವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಂಗಳೂರು ಸಾಮಾಜಿಕ ಕಾರ್ಯಕರ್ತ ಉಮ್ಮರ್ ಯು.ಎಚ್ ಅವರು ಮಾತನಾಡಿ, ಜಿಲ್ಲೆಯಲ್ಲಿ ನಿರಂತರವಾಗಿ ಸಮುದಾಯಿಕವಾಗಿ ಕೊರೋನ ಸೋಂಕು ಹರಡುತ್ತಿದೆ. ಕೊರೋನ ದೇಶದ ಸಮಸ್ಯೆಯಲ್ಲ. ಕೊರೋನ ಬಗ್ಗೆ ಯಾವುದೇ ಭಯಪಡದೇ ಒಟ್ಟಾಗಿ ಹೋರಾಟ ನಡೆಸಬೇಕು. ಸೋಂಕು ಹರಡದಂತೆ ಪ್ರತಿಯೊಬ್ಬರು ನಿಯಮಗಳನ್ನು ಪಾಲಿಸುವ ಮೂಲಕ ಜಾಗೃತಗೊಳ್ಳಬೇಕು ಎಂದು ಹೇಳಿದರು. 

ಉಕ್ಕುಡ ಜುಮಾ ಮಸೀದಿ ಖತೀಬು ಅಹ್ಮದ್ ಶರೀಫ್ ಕಾಮಿಲ್ ಸಖಾಫಿ ದುವಾಃ ಆಶೀರ್ವಚನ ನೀಡಿದರು. ಲಯನ್ಸ್ ಜಿಲ್ಲಾ ಗವರ್ನರ್ ಡಾ.ಗೀತಾಪ್ರಕಾಶ್, ಟೋಪ್ಕೋ ಜ್ಯುವೆಲ್ಲರಿ ಪಾಲುದಾರ ಮೊಹಮ್ಮದ್ ಟಿ.ಕೆ  ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ನೆಕ್ಕರೆಕಾಡು, ಕಾರ್ಯದರ್ಶಿ ಶರೀಫ್ ತೈಬಾ, ಕಾರ್ಯಾಧ್ಯಕ್ಷ ಅಬ್ಬಾಸ್ ಟಿಎಚ್‍ಎಂಎ, ಕೋಶಾಧಿಕಾರಿ ವಿ.ಕೆ ಅಬ್ದುರ್ರಹ್ಮಾನ್ ಹಾಜಿ ಕೇಪು, ಮುರ್ಶಿದುಲ್ ಅನಾಮ್ ಸ್ವಲಾತ್ ಕಮಿಟಿ ಅಧ್ಯಕ್ಷ ಹನೀಫ್ ಕುದ್ದುಪದವು, ಉಪಸ್ಥಿತರಿದ್ದರು.
ಜಮಾಅತ್ ಕಮಿಟಿ ಸದಸ್ಯರಾದ ರಶೀದ್ ವಿಟ್ಲ, ಸ್ವಾಗತಿಸಿ, ನಿರೂಪಿಸಿದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News