ನೇಪಾಳದಲ್ಲಿ ಡಿಡಿ ಹೊರತುಪಡಿಸಿ ಭಾರತದ ಎಲ್ಲಾ ನ್ಯೂಸ್ ಚಾನೆಲ್ ಗಳಿಗೆ ನಿಷೇಧ: ವರದಿ

Update: 2020-07-09 17:11 GMT

ಹೊಸದಿಲ್ಲಿ: ನೇಪಾಳ-ಭಾರತದ ನಡುವೆ ನೂತನ ಭೂಪಟಕ್ಕೆ ಸಂಬಂಧಿಸಿ ಸಂಬಂಧ ಅನಿಶ್ಚಿತತೆಯಲ್ಲಿರುವ ನಡುವೆಯೇ ನೇಪಾಳವು ದೇಶದಲ್ಲಿ ದೂರದರ್ಶನ ಹೊರತುಪಡಿಸಿ ಭಾರತದ ಎಲ್ಲಾ ಸುದ್ದಿ ಚಾನೆಲ್ ಗಳನ್ನು ನಿಷೇಧಿಸಿದೆ ಎಂದು ವರದಿಯಾಗಿದೆ.

ಈ ಬಗ್ಗೆ ಭಾರತ ಮತ್ತು ನೇಪಾಳದ ಹಲವು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ಬೆಳವಣಿಗೆಯನ್ನು ದೃಢೀಕರಿಸಿದೆ. ಭಾರತದ ಚಾನೆಲ್ ಗಳ ಸಿಗ್ನಲ್ ಸ್ವಿಚ್ ಆಫ್ ಆಗಿದೆ ಎಂದು ನೇಪಾಳದ ಕೇಬಲ್ ಆಪರೇಟರ್ ಗಳು ಮಾಹಿತಿ ನೀಡಿದ್ದಾಗಿ ಕೆಲ ಮಾಧ್ಯಮಗಳು ವರದಿ ಮಾಡಿವೆ.

ನೇಪಾಳದ ಪ್ರಧಾನಿ ಕೆ.ಪಿ. ಶರ್ಮಾ ಬಗ್ಗೆ ಭಾರತದ ಚಾನೆಲ್ ಗಳು ಮಾನಹಾನಿಕರ ಸುದ್ದಿಗಳನ್ನು ಪ್ರಸಾರ ಮಾಡುತ್ತಿವೆ ಎಂದು ಆರೋಪಿಸಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ನೇಪಾಳದ ಹಿಮಾಲಯನ್ ಟೈಮ್ಸ್ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News