ವಿಶ್ವದಲ್ಲಿ ಉದಾರವಾದದ ವಿರುದ್ಧದ ಶಕ್ತಿಗಳ ವಿಜೃಂಭಣೆ

Update: 2020-07-09 17:33 GMT

ಲಂಡನ್, ಜು. 9: ವಾಕ್ ಸ್ವಾತಂತ್ರ್ಯಕ್ಕೆ ಅಡ್ಡಿಪಡಿಸುವ ‘‘ಉದಾರವಾದ ವಿರೋಧಿ ಶಕ್ತಿಗಳು’’ ಜಗತ್ತಿನಾದ್ಯಂತ ವಿಜೃಂಭಿಸುತ್ತಿರುವ ಬಗ್ಗೆ ಎಚ್ಚರಿಕೆ ನೀಡುವ ಬಹಿರಂಗ ಪತ್ರವೊಂದಕ್ಕೆ ಸಾಹಿತಿಗಳಾದ ಸಲ್ಮಾನ್ ರಶ್ದಿ, ಜೆ.ಕೆ. ರೌಲಿಂಗ್ ಮತ್ತು ಮಾರ್ಗರೆಟ್ ಆ್ಯಟ್ವುಡ್ ಸೇರಿದಂತೆ ಜಗತ್ತಿನಾದ್ಯಂತದ ಸುಮಾರು 150 ಸಾಹಿತಿಗಳು, ಕಲಾವಿದರು ಮತ್ತು ಮಾನವಹಕ್ಕುಗಳ ಹೋರಾಟಗಾರರು ಸಹಿ ಹಾಕಿದ್ದಾರೆ.

‘ಸೆನ್ಸಾರ್’ ಪ್ರವೃತ್ತಿ ಹರಡುತ್ತಿದ್ದು, ವಿರೋಧಿ ಸಿದ್ಧಾಂತಗಳ ಅಸಹಿಷ್ಣುತೆಗೆ ಹಾಗೂ ಸಾರ್ವಜನಿಕ ನಿಂದನೆ ಮತ್ತು ಬಹಿಷ್ಕಾರದಂತಹ ಚಟುವಟಿಕೆಗಳಿಗೆ ಹಾದಿ ಮಾಡಿಕೊಡುತ್ತಿದೆ.

ಬಹಿರಂಗ ಪತ್ರಕ್ಕೆ ಸಹಿ ಹಾಕಿದವರಲ್ಲಿ ಅಮೆರಿಕದ ಮಾನವಹಕ್ಕುಗಳ ಕಾರ್ಯಕರ್ತ ನೋಮ್ ಚೊಮ್ಸ್ಕಿ ಮತ್ತು ಭಾರತದ ಇತಿಹಾಸ ತಜ್ಞೆ ಮೀರಾ ನಂದಾ ಸೇರಿದ್ದಾರೆ. ಈ ಪತ್ರವು ಮಂಗಳವಾರದ ‘ಹಾರ್ಪರ್ಸ್ ಮ್ಯಾಗಝಿನ್’ ಪತ್ರಿಕೆಯಲ್ಲಿ ಪ್ರಕಟವಾಗಿದೆ.

ಜನಾಂಗೀಯ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ನಡೆಸಲಾಗುತ್ತಿರುವ ‘ಬ್ಲ್ಯಾಕ್ ಲೈವ್ಸ್ ಮ್ಯಾಟರ್’ ಮತ್ತು ಇತರ ಶಕ್ತಿಶಾಲಿ ಪ್ರತಿಭಟನೆಗಳಿಗೆ ಪತ್ರವು ಬೆಂಬಲ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News