ಉಳ್ಳಾಲ: 33 ಮಂದಿಯಲ್ಲಿ ಕೊರೋನ ಸೋಂಕು ದೃಢ

Update: 2020-07-09 17:40 GMT

ಉಳ್ಳಾಲ, ಜು.9: ಉಳ್ಳಾಲದಲ್ಲಿ ಗುರುವಾರ 10 ಮಹಿಳೆಯರು ಸೇರಿದಂತೆ ಒಟ್ಟು 33 ಮಂದಿಯಲ್ಲಿ ಕೊರೋನ ಇರುವುದು ದೃಢಪಟ್ಟಿದೆ.
ಅಲ್ಲದೇ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಓರ್ವ ಮಹಿಳೆ ಸೇರಿದಂತೆ ನಾಲ್ಕು ಮಂದಿಯಲ್ಲಿ, ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ ಓರ್ವ ಪುರುಷ, ದೇರಳಕಟ್ಟೆಯಲ್ಲಿ ಮೂವರು ಪುರುಷರಲ್ಲಿ, ತಲಪಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಓರ್ವ ಪುರುಷ, ಮಂಜನಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಓರ್ವ ಪುರುಷ, ಮುನ್ನೂರು ಗ್ರಾಮದ ಕುತ್ತಾರ್ ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 33 ಮಂದಿಯಲ್ಲಿ ಕೊರೋನ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಮಾಸ್ತಿಕಟ್ಟೆಯ 42 ವರ್ಷದ ಮಹಿಳೆ, ಉಳ್ಳಾಲ ಖಾಸಗಿ ಆಸ್ಪತ್ರೆಯಲ್ಲಿ 18, 23 ವರ್ಷದ ಯುವತಿಯರು, ಮುಕಚ್ಚೇರಿಯಲ್ಲಿ 50, 45 ವರ್ಷದ ಪುರುಷರು, 26 ವರ್ಷದ ಯುವತಿ, ಉಳ್ಳಾಲ ಬೈಲ್‌ನಲ್ಲಿ 72 ವರ್ಷದ ವೃದ್ಧ, ಕಾಪಿಕಾಡ್‌ನಲ್ಲಿ 25 ವರ್ಷದ ಪುರುಷ, ಕೋಡಿಯಲ್ಲಿ 30, 37, ವರ್ಷದ ಪುರುಷರಲ್ಲಿ, 27, 43, 54 ವರ್ಷದ ಮಹಿಳೆಯರಲ್ಲಿ, ಅಕ್ಕರೆ ಕೆರೆ 45ವರ್ಷದ ಪುರುಷ, ಚೆಂಬುಗುಡ್ಡೆಯಲ್ಲಿ 32 ವರ್ಷದ ಮಹಿಳೆ, ಕೋಟೆ ಪುರದಲ್ಲಿ 44 ವರ್ಷದ ಪುರುಷ ಸುಂದರಿಬಾಗ್‌ನಲ್ಲಿ 56 ವರ್ಷದ ಪುರುಷ ಕೋಟೆಕಾರು ಪಟ್ಟಣ ಪಂಚಾಯತ್ ‌ವ್ಯಾಪ್ತಿಯಲ್ಲಿ 64, 58, 30 ವರ್ಷದ ಪುರುಷರು ಹಾಗೂ 60 ವರ್ಷದ ಮಹಿಳೆ, ಕುತ್ತಾರ್‌ನಲ್ಲಿ 18, 40 ವರ್ಷದ ಯುವತಿಯರು, ಉಚ್ಚಿಲ ಪ್ರದೇಶದಲ್ಲಿ 50 ವರ್ಷದ ಪುರುಷ ವ್ಯಕ್ತಿಯಲ್ಲಿ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. ಇದರಿಂದ ಜೂ.23ರಿಂದ ಈವರೆಗೆ ಉಳ್ಳಾಲದಲ್ಲಿ 212ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News