ಶುಕ್ರವಾರದಿಂದ ಶಿರ್ತಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಲಾಕ್‌ಡೌನ್

Update: 2020-07-09 17:47 GMT

ಮೂಡುಬಿದಿರೆ, ಜು.9: ಕೊರೋನ ಸೋಂಕು ದಿನದಿಂದ ದಿನಕ್ಕೆ ಹೆಚ್ಚಳವಾಗಿ ಸಮುದಾಯಕ್ಕೆ ಹರಡುವ ಅಪಾಯವನ್ನರಿತ ಶಿರ್ತಾಡಿಯ ವ್ಯಾಪಾರಸ್ಥರು ಶುಕ್ರವಾರದಿಂದ 18ರವರೆಗೆ ಅರ್ಧ ದಿನ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಮಾಡುವುದೆಂದು ಶಿರ್ತಾಡಿ ಗ್ರಾಮ ಪಂಚಾಯತ್‌ನಲ್ಲಿ ಗುರುವಾರ ನಡೆದ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ.

ಕೊರೋನ ಸೋಂಕು ನಿಯಂತ್ರಣಕ್ಕೆ ಮೂಡುಬಿದಿರೆಯಲ್ಲಿ ಅರ್ಧ ದಿನ ಲಾಕ್‌ಡೌನ್ ಮಾಡಲಾಗಿದೆ. ಅದೇ ಮಾದರಿಯನ್ನು ಶಿರ್ತಾಡಿಯಲ್ಲು ಜಾರಿ ಮಾಡಬೇಕು ಎಂದು ಹೆಚ್ಚಿನ ವ್ಯಾಪಾರಸ್ಥರು ಸಲಹೆಯಿತ್ತಾಗ ಇದಕ್ಕೆ ಎಲ್ಲರು ಸಮ್ಮತಿ ನೀಡಿದರು.

ಕೇವಲ ಲಾಕ್‌ಡೌನ್‌ನಿಂದ ಕೊರೋನ ನಿಯಂತ್ರಿಸಲಾಗದು. ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಬೇಕು ಎಂಬ ಸಲಹೆ ಕೂಡ ಸಭೆಯಲ್ಲಿ ಕೇಳಿಬಂತು.

ಜಿಪಂ ಸದಸ್ಯೆ ಸುಜಾತಾ, ಎಪಿಎಂಸಿ ಅಧ್ಯಕ್ಷ ಪ್ರವೀಣ್ ಕುಮಾರ್ ಜೈನ್, ಪಂ.ಮಾಜಿ ಅಧ್ಯಕ್ಷೆ ಲತಾ ಪಿ. ಹೆಗ್ಡೆ, ಉಪಾಧ್ಯಕ್ಷ ರಾಜೇಶ್ ಪೂಜಾರಿ, ಬಿಜೆಪಿ ಮುಖಂಡ ಸುಖೇಶ್ ಶೆಟ್ಟಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜೇಶ್, ವ್ಯಾಪಾರಸ್ಥರಾದ ನಯನವರ್ಮ ಜೈನ್, ಅಜಿತ್ ಕುಮಾರ್, ಉಬೇದ್ ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ನಬೀಸಾ ಹಾಗೂ ಮತ್ತಿತರರುಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News