×
Ad

ಲಕ್ಷ್ಮೀನಗರ ಯೋಗೀಶ್ ಪೂಜಾರಿ ಕೊಲೆ ಪ್ರಕರಣ: ಪೊಲೀಸ್ ಕಸ್ಟಡಿಯಲ್ಲಿದ್ದ ಆರೋಪಿಗಳಿಗೆ ನ್ಯಾಯಾಂಗ ಬಂಧನ

Update: 2020-07-10 22:14 IST

ಮಲ್ಪೆ, ಜು.10: ತೆಂಕನಿಡಿಯೂರು ಗ್ರಾಮದ ಲಕ್ಷ್ಮೀನಗರದ ಯೋಗೀಶ್ ಪೂಜಾರಿ(26) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸ್ ಕಸ್ಟಡಿಯಲ್ಲಿದ್ದ ರೌಡಿ ಶೀಟರ್ ಕಲ್ಯಾಣಪುರದ ಸುಜಿತ್ ಪಿಂಟೋ(37) ಹಾಗೂ ಲಕ್ಷ್ಮೀನಗರದ ವಿನಯ ದೇವಾಡಿಗ(36) ಎಂಬವರನ್ನು ಪೊಲೀಸರು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದುಕೊಂಡ ಆರೋಪಿಗಳನ್ನು ತನಿಖೆಗೆ ಒಳಪಡಿಸಿರುವ ಪೊಲೀಸರು, ಅವಧಿಗೆ ಮುನ್ನ ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಇವರಿಗೆ ನ್ಯಾಯಾಲಯ ಜು.23ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.

ಬಂಧಿತ ಉಳಿದ ಆರೋಪಿಗಳಾದ ರೋಹಿತ್ ಪಿಂಟೋ ಹಾಗೂ ಪ್ರದೀಪ್ ಪೂಜಾರಿ ಯಾನೆ ಅಣ್ಣು ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಲೆ ಮರೆಸಿಕೊಂಡಿರುವ ಉಳಿದ ಇಬ್ಬರು ಆರೋಪಿಗಳಾದ ಗಿರೀಶ್ ಹಾಗೂ ಅನುಪ್‌ಗಾಗಿ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News