ಕೊರೋನ ನಿಯಂತ್ರಣ ಕಾರ್ಯದಲ್ಲಿ ರೋಟರಿ ಕೊಡುಗೆಯೂ ಗಮನಾರ್ಹ: ನಾಗಾರ್ಜುನ

Update: 2020-07-10 17:16 GMT

ಮೂಡುಬಿದಿರೆ: ಕಾಡುತ್ತಿರುವ ಕೊರೋನ ಪಿಡುಗಿನ ನಿವಾರಣೆಯ ಕಾರ್ಯದಲ್ಲಿ ರೋಟರಿ ವತಿಯಿಂದ ರಾಷ್ಟ್ರಮಟ್ಟದಲ್ಲಿ 300 ಕೋಟಿ ರೂಗಳಷ್ಟು ನೆರವು ಸಂದಿದೆ. ಅಂತಾರಾಷ್ಟ್ರೀಯ ರೋಟರಿಯಿಂದ ಗ್ಲೋಬಲ್ ಗ್ರ್ಯಾಂಟ್ ಯೋಜನೆಗಳಡಿ ಈಗಾಗಲೇ ಸುಮಾರು 1.8 ಮಿಲಿಯನ್ ಡಾಲರ್ ನೆರವು ದಕ್ಷಿಣ ಕನ್ನಡವೂ ಸೇರಿದಂತೆ ದೇಶದ 36 ಜಿಲ್ಲೆಗಳಿಗೆ ಬಂದಿದ್ದು ತಲಾ 25 ಸಾವಿರ ಡಾಲರ್‍ನಷ್ಟು ನೆರವಿನ ಕೊರೋನ ನಿಯಂತ್ರಣ ಚಟುವಟಿಕೆಗಳು ನಡೆದಿದೆ. ಈ ಸೇವಾ ಕಾರ್ಯಗಳು ಈ ವರ್ಷವೂ ನಡೆಯುವ ವಿಶ್ವಾಸವಿದೆ ಎಂದು ರೋಟರಿ ಜಿಲ್ಲಾ ಮಾಜಿ ಗವರ್ನರ್ ರೊ.ನಾಗಾರ್ಜುನ ಹೇಳಿದರು.

ಅವರು ರೋಟರಿ ಸಮ್ಮಿಲನ ಸಭಾಂಗಣದಲ್ಲಿ ಸೋಮವಾರ ಸ ಜರಗಿದ ಮೂಡುಬಿದಿರೆ ರೋಟರಿ ಕ್ಲಬ್‍ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 

ರೋಟರಿ ಕ್ಲಬ್ ನೂತನ ಅಧ್ಯಕ್ಷರಾಗಿ ಡಾ.ಸುದೀಪ್ ಕುಮಾರ್ ಮತ್ತು ಪದಾಧಿಕಾರಿಗಳು ಅಧಿಕಾರ ವಹಿಸಿಕೊಂಡರು. ಪದಗ್ರಹಣ ನೆರವೇರಿಸಿ ಮಾತನಾಡಿದ ರೋಟರಿ ಜಿಲ್ಲಾ ಅಸಿಸ್ಟೆಂಟ್ ಗವರ್ನರ್ ಡಾ.ಯತಿಕುಮಾರ್ ಸ್ವಾಮಿ ಗೌಡ ಶುಭ ಹಾರೈಸಿದರು. ನಿರ್ಗಮನ ಅಧ್ಯಕ್ಷ ಸಿ.ಹೆಚ್.ಗಪೂರ್ ಸ್ವಾಗತಿಸಿ ತನ್ನ ಅವಧಿಯ ಸೇವಾಕಾರ್ಯಗಳು,ಸಾಧನೆಗಳಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು. ನಿರ್ಗಮನ ಕಾರ್ಯದರ್ಶಿ ನಾಗರಾಜ್ ವರದಿ ವಾಚಿಸಿದರು.ಎಂ.ಸಿ.ಎಸ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾದ ಬಾಹುಬಲಿ ಪ್ರಸಾದ್ ಅವರನ್ನು ಸಮ್ಮಾನಿಸಲಾಯಿತು. 

ಜಿಲ್ಲಾ ಗವರ್ನರ್ ಸಂದೇಶ ಬಿತ್ತರಿಸಲಾಯಿತು. ಮಾಜಿ ಗವರ್ನರ್ ಸುರೇಶ್ ಚಂಗಪ್ಪ ಶುಭ ಹಾರೈಸಿದರು. ವಲಯ ಲೆಫ್ಟಿನೆಂಟ್ ಬಲರಾಮ ಕೆ.ಎಸ್ ರೋಟಾದ್ರಿ ಸಂಚಿಕೆ ಅನಾವರಣಗೊಳಿಸಿದರು.ರೋಟರಿ ಜಿಲ್ಲಾ ಸಂಪುಟದಲ್ಲಿ ಪದಾಧಿಕಾರಿಗಳು, ನಿರ್ಗಮನ ಅಧ್ಯಕ್ಷ, ಕಾರ್ಯದರ್ಶಿ ಕಾರ್ಯದರ್ಶಿಯವರನ್ನು ಗೌರವಿಸಲಾಯಿತು. ನೂತನ ಕಾರ್ಯದರ್ಶಿ ಡಾ.ಅರವಿಂದ ಕಿಣಿ ವಂದಿಸಿದರು.ಕು.ಶ್ರೀಯಾ ಜೈನ್ ಸ್ವಾಗತ ನೃತ್ಯ ಪ್ರಸ್ತುತ ಪಡಿಸಿದರು. ಶ್ರೀಕಾಂತ್ ಕಾಮತ್ ಮತ್ತು ಸಹನಾ ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News