ಐಸಿಎಸ್‍ಸಿ: ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ವಿದ್ಯಾರ್ಥಿಗಳ ಸಾಧನೆ

Update: 2020-07-10 18:03 GMT

ಭಟ್ಕಳ: 2019-20 ನೇ ಸಾಲಿನ ಐಸಿಎಸ್‍ಸಿ ಪಠ್ಯಕ್ರಮದ 10ನೇ ತರಗತಿಯ ಫಲಿತಾಂಶವು ಪ್ರಕಟಗೊಂಡಿದ್ದು, ಭಟ್ಕಳದ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಸತತ 6ನೇ ವರ್ಷ 100% ಫಲಿತಾಂಶ ಪಡೆದು ಸಾಧನೆ ಮಾಡಿದೆ. 

ವಿದ್ಯಾರ್ಥಿಗಳಾದ ಟಿ .ಆರ್ ಮನ್ವಿತಾ 96.20%, ಆರ್ಯಾ ರಾಜೇಶ್ ನಾಯಕ 95.80% , ಸಂಧ್ಯಾ ಬೈಂದೂರ್ 95.60%, ಸಿಂಧು ನಾಯ್ಕ 94.40% ವಿನೀತ್ ಪೈ 94.20% ಬಿ.ಎನ್ ನಮಿತಾ93.80%,  ಆಮ್ನಾ ಸಾಹಾ92%, ಹರ್ಷಿತಾ ಮಾದನಗೇರಿ 91.60%, ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.ಈ ಎಲ್ಲಾ ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಪ್ರಾಂಶುಪಾಲರು ಹಾಗೂ ಶಿಕ್ಷಕ ವೃಂದದವರು ಅಭಿನಂದನೆಯನ್ನು ಸಲ್ಲಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News