ಉಳ್ಳಾಲ ನಗರಸಭಾ ವ್ಯಾಪ್ತಿಯಲ್ಲಿ ಮೂವರಿಗೆ, ಕೋಟೆಕಾರ್‌ನಲ್ಲಿ 6 ಮಂದಿಗೆ ಕೊರೋನ ದೃಢ

Update: 2020-07-10 18:08 GMT

ಉಳ್ಳಾಲ, ಜು.10: ನಗರ ಸಭಾ ವ್ಯಾಪ್ತಿಯಲ್ಲಿ ಶುಕ್ರವಾರ ಮೂರು ಕೊರೋನ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ 6, ಸೋಮೇಶ್ವರ ಪುರಸಭೆ ವ್ಯಾಪ್ತಿಯಲ್ಲಿ 4, ಅಂಬ್ಲಮೊಗರು ಗ್ರಾಮದಲ್ಲಿ 2, ನರಿಂಗಾನ ಗ್ರಾಮದಲ್ಲಿ ಒಂದು ಕೊರೋನ ಸೋಂಕು ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಉಳ್ಳಾಲದಲ್ಲಿ ಶುಕ್ರವಾರ ಮಾಸ್ತಿಕಟ್ಟೆಯಲ್ಲಿ 26 ವರ್ಷದ ಯುವಕ, ಬಸ್ತಿಪಡ್ಪುವಿನಲ್ಲಿ 29 ವರ್ಷದ ಮಹಿಳೆ, ಸುಂದರಿ ಬಾಗ್‌ನಲ್ಲಿ 25 ವರ್ಷದ ಮಹಿಳೆ, ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಅಜ್ಜಿ ನಡ್ಕದಲ್ಲಿ 48 ವರ್ಷದ ಪುರುಷ, ಮಾಡೂರಿನಲ್ಲಿ 32 ವರ್ಷದ ಪುರುಷ, ಕೆ.ಎಂ. ನಗರ ಕೋಟೆಕಾರುನಲ್ಲಿ 43, 45, 19 ವರ್ಷದ ಪುರುಷ, ಹಾಗೂ 43 ವರ್ಷದ ಮಹಿಳೆ, ಖಾಸಗಿ ಆಸ್ಪತ್ರೆಯಲ್ಲಿ 25 ವರ್ಷದ ಮಹಿಳೆ, ಸೋಮೇಶ್ವರ ಪುರಸಭೆ ವ್ಯಾಪ್ತಿಯ ಬೈತುಲ್ ಅಮೀನ್‌ನಲ್ಲಿ 50 ವರ್ಷದ ಪುರುಷ, ಉಚ್ಚಿಲದಲ್ಲಿ 42 ವರ್ಷದ ಪುರುಷ, ರೈಲ್ವೆ ಸ್ಟೇಷನ್ ಬಳಿ 42 ವರ್ಷದ ಪುರುಷ ಅಂಬ್ಲಮೊಗರು ಗ್ರಾಮದ ಸ್ನೇಹ ಹಿತ್ಲುವಿನಲ್ಲಿ 43 ವರ್ಷದ ಪುರುಷ, ಎಲಿಯಾರ್ ಪದವುನಲ್ಲಿ 27 ವರ್ಷದ ಮಹಿಳೆ, ಮುನ್ನೂರು ಗ್ರಾಮದ ಸಂತೋಷ್ ನಗರದಲ್ಲಿ 44 ವರ್ಷದ ಪುರುಷ, ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್‌ನಲ್ಲಿ 55 ವರ್ಷದ ಮಹಿಳೆಯಲ್ಲಿ ಕೊರೋನ ಇರುವುದು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ.

ಇದರಿಂದ ಜೂ.23 ರಿಂದ ಈವರೆಗೆ ಉಳ್ಳಾಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಟ್ಟು 225 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News